Top

ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ದೊರೆತಿದೆ ಬಿಗ್ ಟ್ವಿಸ್ಟ್

ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ದೊರೆತಿದೆ ಬಿಗ್ ಟ್ವಿಸ್ಟ್
X

[story-lines]

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗೌರಿ ಹತ್ಯೆಯ ಹಿಂದೆ ಸನಾತನ ಸಂಸ್ಥೆಯ ಕೈವಾಡವಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಆರೋಪಕ್ಕೆ ಪೂರಕವಾಗುವಂತೆ ಸನಾತನ ಸಂಸ್ಥೆಯ ವಿರುದ್ಧ ಸಾಕ್ಷಿಯೊಂದು ದೊರೆತಿದೆ.

ಅದೇನೆಂದರೆ, ಮದ್ದೂರಿನಲ್ಲಿ ಸನಾತನ ಧರ್ಮದ ಮುಖಂಡರ ಸಭೆ ನಡೆದಿದ್ದು, ಸಭೆ ನಡೆಸುವ ನೇತೃತ್ವವನ್ನು ಬಂಧಿತ ಆರೋಪಿ ನವೀನ್ ವಹಿಸಿಕೊಂಡಿದ್ದನೆನ್ನಲಾಗಿದೆ.ನವೆಂಬರ್ 19, 2017ರಂದು ಸಂಜೆ ನವೀನ್ ಹಾಗೂ ಚಾಮರಾಜನಗರ ಮೂಲದ ಶಿವರಾಮ್ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, 250 ಜನ ಭಾಗಿಯಾಗಿದ್ದರು.

ಮದ್ದೂರಿನ ಅನ್ನಪೂರ್ಣೇಶ್ವರಿ ಕಲ್ಯಾಣ ಮಂದಿರದಲ್ಲಿ ಸನಾತನ ಸಂಸ್ಥೆಯ ಸಭೆ ನಡೆದಿದ್ದು, 2500 ರೂಪಾಯಿಗಳಿಗೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂದಿರವನ್ನ ಹಿಂದೂ ಯುವಸೇನಾ ಅಧ್ಯಕ್ಷನಾಗಿದ್ದ ಆರೋಪಿ ನವೀನ್ ಬಾಡಿಗೆಗೆ ಪಡೆದಿದ್ದನಂತೆ.

ಇನ್ನು ಕಲ್ಯಾಣಮಂಟಪದ ಮಾಲೀಕ ಸುಧೀರ್ ಕುಮಾರ್ ಈ ಬಗ್ಗೆ ಎಸ್ಐಟಿಗೆ ಮಾಹಿತಿ ನೀಡಿದ್ದು, ಸಭೆಗೆ ಬಂದಿದ್ದ ಹಿಂದೂ ಯುವಸೇನೆಯವರು ನನಗೆ ಪರಿಚಯವಿಲ್ಲ. ಆದರೆ ಮತ್ತೊಮ್ಮೆ ಅವರನ್ನ ನೋಡಿದ್ರೆ ಗುರುತಿಸುವುದಾಗಿ ಹೇಳಿದ್ದಾರೆ.

Next Story

RELATED STORIES