Top

ಯೋಗಿ ಆದಿತ್ಯನಾಥ್ ವಿರುದ್ಧ ಪತಂಜಲಿ ಕಂಪನಿ ಅಸಮಾಧಾನ

ಯೋಗಿ ಆದಿತ್ಯನಾಥ್ ವಿರುದ್ಧ ಪತಂಜಲಿ ಕಂಪನಿ ಅಸಮಾಧಾನ
X

[story-lines]

ಉತ್ತರಪ್ರದೇಶದ ನೋಯ್ಡಾದಲ್ಲಿ ಫುಡ್ ಪಾರ್ಕ್ ಮಾಡುವುದಕ್ಕೆ ಅಲ್ಲಿನ ಸರ್ಕಾರ ಸರಿಯಾಗಿ ಸಹಕರಿಸುತ್ತಿಲ್ಲವೆಂದು ಬಾಬಾರಾಮ್ ದೇವ್ ಆರೋಪಿಸಿದ್ದಾರೆ. ಯುಪಿಯ ನೋಯ್ಡಾದಲ್ಲಿ 6,000ಕೋಟಿ ರೂಪಾಯಿ ಖರ್ಚು ಮಾಡಿ ದೊಡ್ಡ ಫುಡ್ ಪಾರ್ಕ್ ಮಾಡಲು ಪತಂಜಲಿ ಕಂಪನಿ ಪ್ಲಾನ್ ಮಾಡಿದ್ದು, ಆದರೆ ಈ ಕೆಲಸಕ್ಕೆ ಯೋಗಿ ಆದಿತ್ಯನಾಥ್ ಸಹಕರಿಸುತ್ತಿಲ್ಲವೆಂದು ಆರೋಪಿಸಲಾಗಿದೆ.

ಪತಂಜಲಿಯ ಈ ಕೆಲಸದಿಂದ ಇಲ್ಲಿನ ರೈತರ ಬಾಳು ಹಸನಾಗುತ್ತಿತ್ತು.ಆದರೆ ಉತ್ತರ ಪ್ರದೇಶ ಸರ್ಕಾರ ಈ ಕೆಲಸದಲ್ಲಿ ನಿರಾಸಕ್ತಿ ತೋರಿಸಿದ್ದು, ಫುಡ್ ಪಾರ್ಕ್ ಗೆ ಉತ್ತರಪ್ರದೇಶ ಸರ್ಕಾರ ಸಮ್ಮತಿ ನಿಕಾರಿಸಿದೆ ಎಂದು ಪತಂಜಲಿ ಕಂಪನಿಯ ಎಂ.ಡಿ. ಆಚಾರ್ಯ ಬಾಲಕೃಷ್ಣ ಟ್ವೀಟ್ ಮೂಲಕ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಆಚಾರ್ಯ ಬಾಲಕೃಷ್ಣ, ಈವರೆಗೆ ಪತಂಜಲಿ ಕಂಪನಿ ಫುಡ್ ಪಾರ್ಕ್ ನೋಯ್ಡಾದಲ್ಲಿ ಮಾಡುವ ಬಗ್ಗೆ ಅಂತಿಮಗೊಳಿಸಿಲ್ಲ, ಏಕೆಂದರೆ, ಫುಡ್ ಪಾರ್ಕ್ ಬಗೆಗಿನ ದಾಖಲಾತಿ ವಿವರಗಳ ಪರಿಶೀಲನೆ ನಡೆಸಲು ಉತ್ತರಪ್ರದೇಶ ಸರ್ಕಾರ ಮೀನಮೇಷ ಎಣಿಸುತ್ತಿದೆ.ಹಲವು ವರ್ಷಗಳಿಂದ ನಾವು ಈ ಕೆಲಸಕ್ಕಾಗಿ ಕಾದಿದ್ದೇವು.ಆದರೆ ಫುಡ್ ಪಾರ್ಕ್ ಮಾಡಲು ಉತ್ತರಪ್ರದೇಶ ಸರ್ಕಾರ ಸಹಕಾರ ನೀಡುತ್ತಿಲ್ಲ, ಆದ್ದರಿಂದ ನಾವು ಈ ಪಾರ್ಕ್ ನ್ನ ಬೇರೆಡೆ ಸ್ಥಳಾಂತರಿಸಲು ನಿಶ್ಚಯಿಸಿದ್ದೇವೆ ಎಂದಿದ್ದಾರೆ.

ಪತಂಜಲಿ ಕಂಪನಿಯ ಪ್ರಕಾರ, ಈ ಫುಡ್ ಪಾರ್ಕ್ ನಿರ್ಮಾಣವಾದರೆ ಹತ್ತುಸಾವಿರ ಜನರಿಗೆ ಉದ್ಯೋಗ ಒದಗಿಸಬಹುದು ಅಲ್ಲದೇ ಒಂದು ವರ್ಷಕ್ಕೆ ಪತಂಜಲಿ ಕಂಪನಿ 25 ಸಾವಿರ ಕೋಟಿಯಷ್ಟು ಆಹಾರ ಸರಬರಾಜು ಮಾಡಬಹುದು ಎಂದು ಅಂದಾಜಿಸಲಾಗಿದೆ.

Next Story

RELATED STORIES