Top

ಮದುವೆ ನಂತರ ನಟನೆಗೆ ಅಮೂಲ್ಯ ವಾಪಸ್​?

ಮದುವೆ ನಂತರ ನಟನೆಗೆ ಅಮೂಲ್ಯ ವಾಪಸ್​?
X

ಶ್ರೀಧರ್ ಶಿವಮೊಗ್ಗ

[story-lines]

ತನ್ನ ಅನನ್ಯ ಅಂದದ ಸಿರಿಯ ಜೊತೆಗೆ ಅದ್ಭುತ ನಟನೆಯಿಂದ ಕರ್ನಾಟಕದ ಮನೆಮಾತಾದ ನಟಿಮಣಿ ಗೋಲ್ಡನ್ ಕ್ವೀನ್ ಅಮೂಲ್ಯ.. ಮಾಸ್ತಿಗುಡಿ ಹಾಗೂ ಮುಗುಳುನಗೆ ಚಿತ್ರಗಳ ನಂತರ ಹಸೆಮಣೆ ಏರಿ ಗಂಡನ ಮನೆಯ ಗೃಹಲಕ್ಷ್ಮೀಯಾದವರು ಅಮ್ಮೂ...ಯಾವುದೇ ಸ್ಟಾರ್ ನಟಿ ಅನ್ನೋ ಹಮ್ಮು- ಬಿಮ್ಮು ಇಲ್ಲದೆ ಸಾಮಾನ್ಯ ಗೃಹಿಣಿಯಂತೆ ತೆರೆಮರೆ ಸರಿದಿದ್ದ ಅಮೂಲ್ಯ, ಈಗ ಮತ್ತೆ ಕನ್ನಡ ಬೆಳ್ಳಿಮೋಡದಲ್ಲಿ ಮಳೆಯಾಗುವ ಸೂಚನೆ ಕೊಟ್ಟಿದ್ದಾರೆ.

8 ವರ್ಷದ ಬಾಲಕಿಯಾಗಿದ್ದಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡ ಕಲಾವಿದೆ ಈಕೆ. ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯ ಪಟ್ಟವನ್ನು ಅಲಂಕರಿಸಿದ ಅಭಿನೇತ್ರಿ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ ನಟರ ಜೊತೆ 10ಕ್ಕೂ ಹೆಚ್ಚು ಸೂಪರ್ ಹಿಟ್​​ ಸಿನಿಮಾಗಳಲ್ಲಿ ನಟಿಸಿದ ನಟಿಮಣಿ. ಮಾಸ್ತಿ ಗುಡಿ ಮತ್ತು ಮುಗುಳು ನಗೆ ಸಿನಿಮಾಗಳ ನಂತರ ಒಂದು ವರ್ಷದ ಗ್ಯಾಪ್ ಬಳಿಕ, ಮತ್ತೆ ನಾನು ಬಣ್ಣ ಹಚ್ಚಲು ರೆಡಿ ಅಂತ TV5ಗೆ ಎಕ್ಸ್​​ಕ್ಲೂಸಿವ್ ಮಾಹಿತಿ ಕೊಟ್ಟಿದ್ದಾರೆ.

ಇದು ನಟಿ ಅಮೂಲ್ಯ TV5ಗೆ ಕೊಟ್ಟಿರುವ ಎಕ್ಸ್​ಕ್ಲೂಸಿವ್ ಮಾಹಿತಿ.. ಕೆಲ ವರ್ಷಗಳ ಹಿಂದೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಅಮೂಲ್ಯ ಮದುವೆಯಾದ ನಂತರ ಕೊಂಚ ರಿಲ್ಯಾಕ್ಸ್ ಆಗಿದ್ರು. ಮೇಡಂ ಯಾವಾಗ ಮತ್ತೆ ನಿಮ್ಮ ಸಿನಿಮಾ ಎಂದು ಕೇಳಿದ್ರೆ, ನೋಡೋಣ ಒಳ್ಳೆ ಸ್ಕ್ರಿಪ್ಟ್ ಸಿಕ್ರೆ ಮಾಡೋಣ ಎಂದು ಉತ್ತರಿಸುತ್ತಿದ್ರು. ಈಗ ಕೊನೆಗೂ ಅಮೂಲ್ಯ ಇಷ್ಟಪಡುವ , ಅವರಿಗೆ ಒಪ್ಪುವ ಒಂದೊಳ್ಳೆ ಪಾತ್ರ ಬಂದಿದೆ..

ಒಂದೊಳ್ಳೆಯ ಸ್ಕ್ರಿಪ್ಟ್​ ಗಾಗಿ ಕಾಯುತ್ತಿದ್ದೆ. 6 ತಿಂಗಳ ಹಿಂದೆ ಹೊಸ ತಂಡ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂತ ಅಪ್ರೋಚ್ ಮಾಡಿದ್ರು. ಈ ಹಿಂದೆ ನಾನು ಸಾಕಷ್ಟು ಕರ್ಮಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೆ , ಆದ್ರೆ ಇದು ಡಿಫರೆಂಟ್ ಸಬ್ಜೆಕ್ಟ್. ಈ ಪಾತ್ರ ನನಗಾಗಿಯೇ ಸೃಷ್ಟಿಸಿದಂತಿತ್ತು. ನಮ್ಮ ಮಾವನವರು ಚುನಾವಣೆಗೆ ಸಜ್ಜಾಗಿದ್ರಿಂದ ಅಲ್ಲಿ ನಾನು ಬ್ಯುಸಿಯಾಗಿ ಬಿಟ್ಟೆ. ಇನ್ಮುಂದೆ ನನ್ನ ಗುರಿ ಸಿನಿಮಾ. ಆದಷ್ಟು ಬೇಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತೀನಿ.

ಇಷ್ಟು ದಿನ ಕಮರ್ಶಿಯಲ್ ಚಿತ್ರಗಳಿಗೆ ಬಣ್ಣ ಹಚ್ಚಿದ್ದ ಗಜಕೇಸರಿ ನಾಯಕಿ ಈಗ ವಿಭಿನ್ನ ಸಿನಿಮಾವೊಂದಕ್ಕಾಗಿ ಕ್ಯಾಮೆರಾ ಎದುರಿಸಲಿದ್ದಾರೆ. ಸೌಥ್ ಇಂಡಸ್ಟ್ರಿಯ ಫೇಮಸ್ ನಟಿ ನಯನತಾರ ರೀತಿ ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಅಮೂಲ್ಯ.. ಮದುವೆಯಾದ ನಂತರ ನಾನು ಸಿನಿಮಾದಲ್ಲಿ ನಟಿಸುವ ಬಗ್ಗೆ ನಮ್ಮ ಮನೆಯವರ ಸಪೋರ್ಟ್ ಸಂಪೂರ್ಣವಾಗಿ ದೊರೆತಿದೆ. ಮನೆ ಮತ್ತು ಸಿನಿಮಾ ಎರಡನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಬಂದಿದೆ ಎಂದಿದ್ದಾರೆ.

ಅಮೂಲ್ಯ ನಟಿಸಲು ಒಪ್ಪಿಕೊಂಡಿರುವ ಸಿನಿಮಾ ಸಂಪೂರ್ಣ ಹೊಸಬರೆ ಸೇರಿ ಮಾಡುತ್ತಿರುವ ಚಿತ್ರ. ಆಗಸ್ಟ್ ತಿಂಗಳು ಅಮೂಲ್ಯರವರ ಹೊಸ ಸಿನಿಮಾ ಸೆಟ್ಟೇರಲಿದ್ದು , ಇನ್ನೇನು ಕೆಲವೇ ದಿನಗಳಲ್ಲಿ ಅಮೂಲ್ಯರವರೇ ಅಭಿಮಾನಿಗಳಿಗೆ ಹ್ಯಾಪಿ ನ್ಯೂಸ್ ಕೊಡಲಿದ್ದಾರೆ.

Next Story

RELATED STORIES