Top

ಪಿಜಿಯಲ್ಲಿ ವಾಸಿಸುವವರೇ ಎಚ್ಚರದಿಂದಿರಿ..!

ಪಿಜಿಯಲ್ಲಿ ವಾಸಿಸುವವರೇ ಎಚ್ಚರದಿಂದಿರಿ..!
X

[story-lines]

ಬೆಂಗಳೂರು : ಪಿಜಿಯಲ್ಲಿ ವಾಸಿಸೋ ಯುವಕ, ಯುವತಿಯರೇ, ಉದ್ಯೋಗಸ್ಥ ಪುರುಷ, ಮಹಿಳೆಯರೇ, ನೀವು ಮಲಗೋ ಮುನ್ನಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಸಕಲ ವಸ್ತುಗಳು ಬೆಳಗು ಮೂಡೋದ್ರೊಳಗೆ ಮಾಯವಾಗಿಬಿಡ್ತಾವೆ. ಬೆಳಿಗ್ಗೆ ಎದ್ದಾಗ ನಿಮ್ಮ ವಸ್ತುಗಳೇ ನಾಪತ್ತೆಯಾಗಿರುತ್ತಾವೆ. ಯಾಕೆ..? ಹೇಗೆ ಅಂತೀರಾ..? ಮುಂದೆ ಓದಿ...

ಬ್ಯೂಸಿ ಲೈಫ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದ್ರೆ ಸಾಕು, ರೂಮ್‌ಗೆ ಬಂದ್ರೆ ಸಾಕು, ಏನೋ ಒಂಚೂರು ತಿಂದು ಮಲಗಿ ರೆಸ್ಟ್‌ ತಗೋ ಬೇಕು ಅನ್ನೋರೇ ಹೆಚ್ಚು. ಈ ಕಾರಣಕ್ಕೆ ಅನೇಕರು ಸುರಕ್ಷತಾ ಕ್ರಮಗಳನ್ನೇ ಕೈಗೊಳ್ಳೋದಿಲ್ಲ. ಇದರಿಂದಾಗಿ ರಾಜಧಾನಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಇದಕ್ಕೆ ನಿದರ್ಶನ ಅನ್ನೋ ಹಾಗೆ ಬೆಂಗಳೂರು ನವರಂಗ್ ಬಳಿಯ ಬಾಯ್ಸ್ ಪಿಜಿಯಲ್ಲಿ ಕಳ್ಳತನ ನಡೆದಿದೆ.

https://www.youtube.com/watch?v=XiB76hqHJnU

ರಾತ್ರಿಯ ಪಾಳಿಯ ಕೆಲಸಕ್ಕೆ ತೆರಳಿಯೋ, ನಿದ್ದೆಯ ಮಂಪರಿಗೋ ಚಿನ್ಮಯ್‌ ಎಂಬ ಯುವಕ ತನ್ನ ಪಿಜಿಯ ಬಾಗಿಲನ್ನು ಹಾಕೋದು ಮರೆತು ಹಾಗೇ ಮಲಗಿ ಬಿಟ್ಟಿದ್ದಾನೆ. ಹೀಗೆ ಮಲಗಿದ ಚಿನ್ಮಯ್‌ಗೆ ಬೆಳಿಗ್ಗೆ ಎದ್ದಾಗ ಶಾಕಿಂಗ್‌ ಒಂದು ಕಾದಿತ್ತು. ಅದೇ... ತಾನು ಬಾಗಿಲು ಹಾಕದೇ ಮಲಗಿದ್ದರಿಂದ, ಪಿಜಿಗೆ ನುಗ್ಗಿದ ಕಳ್ಳ ತನ್ನ ಕೈ ಚಳಕ ಮೆರೆದಿದ್ದಾನೆ.

ಚಿನ್ಮಯ್‌ ರೂಮ್‌ ಒಳಹೊಕ್ಕ ಕದೀಮನೊಬ್ಬ, ರೂಮ್‌ನಲ್ಲಿದ್ದ ಲ್ಯಾಪ್‌ ಟಾಪ್, ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಈ ಇಡೀ ದೃಶ್ಯ ಪಿಜಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Next Story

RELATED STORIES