Top

ಸುದೀಪ್ ಫ್ಯಾನ್ಸ್ ಯಶ್ ಮೇಲೆ ಗರಂ ಆಗಿದ್ಯಾಕೆ?

ಸುದೀಪ್ ಫ್ಯಾನ್ಸ್ ಯಶ್ ಮೇಲೆ ಗರಂ ಆಗಿದ್ಯಾಕೆ?
X

[story-lines]ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಎಂಬ ಫಿಟ್ ನೆಸ್ ಚಾಲೆಂಜ್ ನ್ನ ನಿನ್ನೆ ಸುದೀಪ್ ಹಲವರಿಗೆ ಕೊಟ್ಟಿದ್ರು. ಈ ಚಾಲೆಂಜ್ ನ್ನ ಅಕ್ಸೆಪ್ಟ್ ಮಾಡಿದ್ದ ಯಶ್, ಫಿಟ್ ನೆಸ್ ಚಾಲೆಂಜ್ ನ್ನ ಕೊಂಚ ಡಿಫ್ರೆಂಟ್ ಆಗಿ ಮಾಡಿ, ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ರು. ಆದ್ರೆ ಈ ವೇಳೆ ಯಶ್ ಸುದೀಪ್ ಗೆ ಹಾಯ್ ಸುದೀಪ್ ಎಂದು ಟ್ವೀಟ್ ಮಾಡಿದ್ದು, ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕಾರಣಕ್ಕಾಗಿ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ಸುದೀಪ್ ನಿಮಗಿಂತ ದೊಡ್ಡವರು ಅವರಿಗೆ ಸರ್ ಎಂದು ಕರೆಯಿರಿ. ಸುದೀಪ್ ಸರ್ ಗೆ ಮರ್ಯಾದೆ ಕೊಡಿ.ಗಿವ್ ರೆಸ್ಪೆಕ್ಟ್, ಅ್ಯಂಡ್ ಟೇಕ್ ರೆಸ್ಪೆಕ್ಟ್. ಸುದೀಪ್ ಸರ್ ಹತ್ತಿರ ಕ್ಷಮೆ ಕೇಳಿ ಎಂದು ಹಲವು ಬಗೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.ಆದರೆ ಇದೆಲ್ಲವನ್ನೂ ಗಮನಿಸಿದ ಕಿಚ್ಚ ಸುದೀಪ್, ನಟ ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ, ಕೆಟ್ಟದಾಗಿ ಟ್ವೀಟ್ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಯಶ್ ನನ್ನ ಚಾಲೆಂಜ್ ಸ್ವೀಕರಿಸಿದ್ದಾರೆ ಅಷ್ಟು ಸಾಕು.. ನೀವು ಅವರ ಕುರಿತು ಕೆಟ್ಟದಾಗಿ ಟ್ವೀಟ್ ಮಾಡಬೇಡಿ ಅಂತ ಅಭಿಮಾನಿಗಳಲ್ಲಿ‌ ಕಿಚ್ಚ ಮನವಿ ಮಾಡಿದ್ದಾರೆ.

https://www.youtube.com/watch?v=iTtObyJB2xA

Next Story

RELATED STORIES