Top

ಒಂದೇ ಚಿತ್ರದಲ್ಲಿ ಮಿಂಚಲಿದ್ದಾರೆ ಹಿರಿಯ ನಟಿಯರ ಪುತ್ರಿಯರು

ಒಂದೇ ಚಿತ್ರದಲ್ಲಿ ಮಿಂಚಲಿದ್ದಾರೆ ಹಿರಿಯ ನಟಿಯರ ಪುತ್ರಿಯರು
X

[story-lines]ಈ ಹಿಂದೆ ನವಗ್ರಹ ಸಿನಿಮಾದ ಮೂಲಕ ಸ್ಟಾರ್​ ನಟರ ಸುಪುತ್ರರು ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಂಡು ಕಮಾಲ್​ ಮಾಡಿದ್ರು.. ಇದೀಗ ಇದೇ ಸಾಲಿಗೆ ಹಿರಿಯ ನಟಿಯರ ಸುಪುತ್ರಿಯರು ಎಂಎಂಸಿಹೆಚ್​ ಚಿತ್ರದ ಮೂಲಕ ದೊಡ್ಡ ಪರದೆ ಮೇಲೆ ಕಮಾಲ್​ ಮಾಡಲು ಸಜ್ಜಾಗಿದ್ದಾರೆ.

ಮುಸ್ಸಂಜೆ ಮಹೇಶ್​ ನಿರ್ದೇಶನದ ಎಂಎಂಸಿಹೆಚ್​ ಚಿತ್ರದಲ್ಲಿ ಹಿರಿಯ ನಟಿಯರಾದ ವಿನಯಾ ಪ್ರಸಾದ್​, ಪ್ರಮಿಳಾ ಜೋಷಾಯ್​, ಸುಧಾ ಬೆಳವಾಡಿ, ಸುಮಿತ್ರಾ ಅವರ ಪುತ್ರಿಯರು ನಟಿಸಿದ್ದಾರೆ. ಚಿತ್ರದಲ್ಲಿ ಮೇಘನಾ ರಾಜ್​, ಸಂಯುಕ್ತಾ ಹೊರ್ನಾಡ್​, ದೀಪ್ತಿ, ಪ್ರಥಮಾ ಪ್ರಸಾದ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಅಂದ್ರೆ ತುಪ್ಪದ ಹುಡುಗಿ ರಾಗಿಣಿ ಮತ್ತೊಮ್ಮೆ ಈ ಚಿತ್ರದಲ್ಲಿ ಪೋಲಿಸ್​ ಅಧಿಕಾರಿಯಾಗಿ ಖಡಕ್ ಡೈಲಾಗ್ ಹೊಡೆದಿದ್ದಾರೆ.ಚಿತ್ರಕ್ಕೆ ಶ್ರೀಧರ್​ ವಿ​ ಸಂಭ್ರಮ್​ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಟ್ರೈಲರ್​ ಹಾಗೂ ಆಡಿಯೋ ಲಾಂಚ್​ ಆಗಿದೆ. ಶೀಘ್ರದಲ್ಲೇ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ ಹಿರಿನಟಿಯರ ಸುಪುತ್ರಿಯರು..

Next Story

RELATED STORIES