Top

ರಜಿನಿ​ ಕ್ಷಮೆ ಕೇಳದಿದ್ರೆ ತೆರಬೇಕು 101ಕೋಟಿ ದಂಡ..!

ರಜಿನಿ​ ಕ್ಷಮೆ ಕೇಳದಿದ್ರೆ ತೆರಬೇಕು 101ಕೋಟಿ ದಂಡ..!
X

[story-lines]

ಸೂಪರ್ ಸ್ಟಾರ್ ರಜಿನಿಕಾಂತ್​ಗೀಗ ಮತ್ತೊಂದು ಸಂಕಷ್ಟ ಶುರುವಾಗಿದೆ.ಕರ್ನಾಟಕದಲ್ಲಿ ಮಾತ್ರ ವಿವಾದ ಸೃಷ್ಠಿಸಿದ್ದ ಕಾಲಾ ಸಿನಿಮಾ, ಕಾಲಕ್ರಮೇಣ ಮಹಾರಾಷ್ಟ್ರದಲ್ಲೊಂದು ವಿವಾದಕ್ಕೆ ಅಣಿಯಾಗಿದೆ. ರಜಿನಿಗೆ 101ಕೋಟಿ ಬೃಹತ್ ಮೊತ್ತದ ಮಾನನಷ್ಟದ ಪ್ರಕರಣ ಎದುರಿಸೋ ಪರಿಸ್ಥಿತಿ ಬಂದಿದೆ.

ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಕಾಲಾ ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ದಿನ ಕಳೆಯುತ್ತಿದಂತೆ ಕಾಲಾ ಚಿತ್ರಕ್ಕೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ರಜಿನಿಕಾಂತ್ ಕಾವೇರಿ ನೀರು ಹಂಚಿಕೆ ಕುರಿತು ನೀಡಿರುವ ಹೇಳಿಕೆಯ ವಿರುದ್ಧ ರೊಚ್ಚಿಗೆದ್ದಿವೆ.

ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಯಾವುದೇ ಕಾರಣಕ್ಕೂ ಕಾಲಾ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಕ್ರಿಯೆಸಿದ್ದಾರೆ. ಕಾಲಾ ಚಿತ್ರದ ವಿತರಣೆ ಹಕ್ಕನ್ನು ಖರೀದಿಸಲು ವಿತರಕರು ಹಿಂದೇಟು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಲ ಚಿತ್ರತಂಡಕ್ಕೆ ಮಹಾರಾಷ್ಟ್ರದ ಪತ್ರಕರ್ತರೊಬ್ಬರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ಪಾ.ರಂಜಿತ್ ನಿರ್ದೇಶನದ ಕಾಲಾ ಚಿತ್ರ ನೈಜ ಘಟನೆಯಾಧರಿತ ಸಿನಿಮಾ. ಮಹಾನಗರಿ ಮುಂಬೈನಲ್ಲಿ ತಮಿಳರು ಹಾಗೂ ಮುಂಬೈನ ಮೂಲ ನಿವಾಸಿಗಳ ನಡುವೆ ನಡೆಯೋ ಕದನಗಳ ಕುರಿತಾದ ಚಿತ್ರ. ಹಾಗಾಗಿ, ಈ ಚಿತ್ರದಲ್ಲಿ ನಮ್ಮ ತಂದೆಯವರನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಮಹಾರಾಷ್ಟ್ರದ ಪತ್ರಕರ್ತರೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದಾರೆ.

ಜವಹಾರ್ ನಡಾರ್ ಅನ್ನೋ ಜರ್ನಲಿಸ್ಟ್ ಕಾಲಾ ಚಿತ್ರದ ಬಗ್ಗೆ ಸದ್ಯ ತಗಾದೆ ತೆಗೆದಿರೋ ವ್ಯಕ್ತಿ. ಕಾಲಾ ಚಿತ್ರ ನಮ್ಮ ತಂದೆ ತಿರುವಯಾಮ್ ನಡಾರ್ ಜೀವನ ಕಥೆಯನ್ನಾಧರಿಸಿದ ಸಿನಿಮಾ ಎಂದಿದ್ದಾರೆ. ನಮ್ಮ ತಂದೆಯವರ ವ್ಯಕ್ತಿತ್ವವನ್ನು ನೆಗೆಟೀವ್ ಆಗಿ ತೋರಿಸಿದ್ದಾರೆ ಅಂತ ಆರೋಪಿಸಿರೋ ಜವಹಾರ್, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

1957ರಲ್ಲಿ ತಮಿಳುನಾಡಿನ ತೂತುಕುಡಿಯಿಂದ ವ್ಯಾಪಾರಕ್ಕಾಗಿ ಬಂದವರು ನಮ್ಮ ತಂದೆ. ಬೆಲ್ಲ ಮತ್ತು ಕಬ್ಬಿಣ ವ್ಯಾಪಾರಿಯಾಗಿದ್ದ ನಮ್ಮ ತಂದೆಯವರನ್ನು ಗೂಡ್​ವಾಲಾ ಸೇಠ್ ಮತ್ತು ಕಾಳಾ ಸೇಠ್ ಎಂದು ಕರೆಯುತ್ತಿದ್ರು. ಆದ್ರೆ ಈ ಚಿತ್ರದಲ್ಲಿ ನಮ್ಮ ತಂದೆಯವರನ್ನು ಶ್ರೀಮಂತ ಹಾಗೂ ಮೇಲ್ಜಾತಿಯವರನ್ನು ಸೆಳೆಯುವ ವ್ಯಕ್ತಿಯಾನ್ನಾಗಿ ಬಿಂಬಿಸಿದ್ದಾರೆ. ಇದು ಸರಿಯಲ್ಲ. ರಜನಿಕಾಂತ್ ಕೂಡಲೇ ಕ್ಷೆಮೆ ಕೋರಬೇಕು. ಇಲ್ಲವಾದಲ್ಲಿ 101ಕೋಟಿಯ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಜವಹಾರ್ ನಡಾರ್, ಕಾಳಾ ಪುತ್ರ ಕೋರ್ಟ್​ ಮೂಲಕ ಚಿತ್ರತಂಡಕ್ಕೆ ನೋಟಿಸ್​ ಕೂಡ ಕಳುಹಿಸಿರೋ ಜವಹಾರ್ ನಡಾರ್, 36 ಗಂಟೆಗಳ ಗಡುವು ನೀಡಿದ್ದಾರೆ. ನೀಡಿದ ಸಮಯದೊಳಗೆ ರಜಿನಿಕಾಂತ್ಡ್ ಆಂಡ್ ಫಿಲ್ಮ್ ಟೀಮ್ ಕ್ಷೆಮೆ ಕೋರಲು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ 101ಕೋಟಿ ದಂಡ ಕಟ್ಟಲು ಸಿದ್ಧರಾಗಿ ಅಂತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಈಗಾಗಲೇ ಕಾಲಾ ಚಿತ್ರದ ರಿಲೀಸ್ ಡೇಟ್ ಜೂನ್ 7ಕ್ಕೆ ನಿಗಧಿಯಾಗಿದ್ದು, ಈ ವಿಚಾರ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ ರಿಲೀಸ್​ಗೆ ವಿರೋಧ, ಮಹಾರಾಷ್ಟ್ರದಲ್ಲಿ ಮಾನನಷ್ಟ ಮೊಕದ್ದಮೆ, ವಿಶ್ವ ಮಾರುಕಟ್ಟೆಯಲ್ಲಿ ಜುರಾಸಿಕ್ ಪಾರ್ಕ್ ಚಿತ್ರದ ಪೈಪೋಟಿ, ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾನೆ ಕಾಲಾ. ಈ ಎಲ್ಲಾವನ್ನು ನೋಡ್ತಿದ್ರೆ, ಕಾಲಾ ಚಿತ್ರಕ್ಕೆ ಕಾಲವೇ ಸರಿಯಿಲ್ವಾ ಅನಿಸಿಬಿಟ್ಟಿದೆ.

Next Story

RELATED STORIES