Top

ಜುಲೈ 10ರವರೆಗೆ ಬಂಧಿಸುವಂತಿಲ್ಲ: ಪಿ.ಚಿದಂಬರಂ ನಿಟ್ಟುಸಿರು

ಜುಲೈ 10ರವರೆಗೆ ಬಂಧಿಸುವಂತಿಲ್ಲ: ಪಿ.ಚಿದಂಬರಂ ನಿಟ್ಟುಸಿರು
X

ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಜುಲೈ 10ರವರೆಗೆ ಬಂಧಿಸದಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ. ಏರ್​ಸೆಲ್​ ಮತ್ತು ಮ್ಯಾಕ್ಸಿಸ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಚಿದಂಬರಂ ನಿಟ್ಟುಸಿರುಬಿಡುವಂತಾಗಿದೆ.

ಪ್ರಕರಣದ ಕುರಿತು ಚಿದಂಬರಂ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಸಮಯವಕಾಶ ಬೇಕು ಎಂದು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶ ಹೊರಡಿಸಿತು.

2006ರಲ್ಲಿ ಏರ್ ಸೆಲ್ ಮತ್ತು ಮ್ಯಾಕ್ಸಿಸ್ ಕಂಪನಿ ನಡುವೆ ನಡೆದ ಅವ್ಯವಹಾರ ಹಾಗೂ ವಿದೇಶಾಂಗ ನೀತಿ ಉಲ್ಲಂಘನೆ ಕುರಿತು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಜಂಟಿ ತನಿಖೆ ನಡೆಸುತ್ತಿವೆ.

Next Story

RELATED STORIES