Top

ಹೆಚ್ಚು ಲಗೇಜ್ ಇದೆಯಾ?: 6 ಪಟ್ಟು ಹೆಚ್ಚು ದಂಡ ಕಟ್ಟಬೇಕಾದೀತು!

ಹೆಚ್ಚು ಲಗೇಜ್ ಇದೆಯಾ?: 6 ಪಟ್ಟು ಹೆಚ್ಚು ದಂಡ ಕಟ್ಟಬೇಕಾದೀತು!
X

ಪ್ರಯಾಣಿಕರ ಲಗೇಜ್​ ಸಾಗಾಟಕ್ಕೆ ಕಡಿವಾಣ ಹಾಕಲು ಕಳೆದ 3 ದಶಕಗಳಿಂದ ರೂಪಿಸಿದ್ದ ಯೋಜನೆಯನ್ನು ಈ ಬಾರಿ ಜಾರಿಗೆ ತರಲು ರೈಲ್ವೆ ಇಲಾಖೆ ಸಜ್ಜಾಗಿದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ರೈಲ್ವೆ ಪ್ರಯಾಣಿಕರು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಗೇಜ್ ಕೊಂಡೊಯ್ದರೆ ಈಗಿನ ದಂಡಕ್ಕಿಂತ 6 ಪಟ್ಟು ಹೆಚ್ಚು ದಂಡ ತೆರಬೇಕಾದೀತು.

[story-lines]

ರೈಲ್ವೆ ಕಂಪಾರ್ಟ್​ಮೆಂಟ್​ನಲ್ಲಿ ಲಗೇಜ್​ಗಳ ಹಾವಾಳಿ ಕುರಿತು ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಲೀಪರ್ ಮತ್ತು ಸೆಕೆಂಡ್ ಕ್ಲಾಸ್ ಪ್ರಯಾಣಿಕರಿಗೆ 30ರಿಂದ ಗರಿಷ್ಠ 40 ಕೆಜಿ ತೂಕದ ಲಗೇಜ್​ಗೆ ಅವಕಾಶ ಇದೆ. ಇದರ ಮೇಲ್ಪಟ್ಟು ಅಂದರೆ 70ರಿಂದ 80 ಕೆಜಿ ತೂಕದ ಲಗೇಜ್ ಸಾಗಿಸಿದರೆ 6 ಪಟ್ಟು ದಂಡ ವಿಧಿಸಲಾಗುವುದು. ಹೆಚ್ಚವರಿ ಲಗೇಜ್ ಅನ್ನು ಪಾರ್ಸೆಲ್ ಎಂದು ಪರಿಗಣಿಸಲಾಗುವುದು ಮತ್ತು ಲಗೇಜ್ ವಾಹನದ ಮೂಲಕವೇ ಸಾಗಿಸಲಾಗುವುದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಈ ನಿಯಮ ಮೊದಲಿನಿಂದಲೂ ಇದೆ. ಆದರೆ ಇನ್ನು ಮುಂದೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಉದಾಹರಣೆಗೆ 500 ಕಿ.ಮೀ. ದೂರ ಪ್ರಯಾಣಿಸುವ ಪ್ರಯಾಣಿಕನ ಬಳಿ 80 ಕೆಜಿ ತೂಕದ ಲಗೇಜ್ ಇರುತ್ತದೆ. ಆದರೆ 40 ಕೆಜಿಗೆ 109 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಮಾನಯಾನದ ವೇಳೆ ಲಗೇಜ್​ಗಳನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಲಾಗುತ್ತಿದೆ. ಆದರೆ ರೈಲ್ವೆ ಇಲಾಖೆಯಲ್ಲಿ ಒಟ್ಟಾರೆಯಾಗಿ ತಪಾಸಣೆ ನಡೆಯುತ್ತಿದೆ. ಈ ಬಗ್ಗೆಯೂ ಇಲಾಖೆ ಗಂಭೀರ ಚಿಂತನೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Next Story

RELATED STORIES