Top

ಜಯನಗರ ಚುನಾವಣೆ: ಕಾಂಗ್ರೆಸ್​ ಸೌಮ್ಯರೆಡ್ಡಿಗೆ ಜೆಡಿಎಸ್​ ಬೆಂಬಲ

ಜಯನಗರ ಚುನಾವಣೆ: ಕಾಂಗ್ರೆಸ್​ ಸೌಮ್ಯರೆಡ್ಡಿಗೆ ಜೆಡಿಎಸ್​ ಬೆಂಬಲ
X

ಜಯನಗರ ವಿಧಾನಸಭಾ ಚುನಾವಣೆಯಲ್ಲ ಕಣಕ್ಕಿಳಿದಿರುವ ಕಾಂಗ್ರೆಸ್​ನ ಸೌಮ್ಯ ರೆಡ್ಡಿ ಅವರಿಗೆ ಜೆಡಿಎಸ್​ ಬೆಂಬಲ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೋನರೆಡ್ಡಿ ಕಣದಿಂದ ಹಿಂದೆ ಸರಿದಿದ್ದಾರೆ.

ಬುಧವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪತ್ರಿಕಾ ಪ್ರಕಟಣೆ ಹೊರಡಿಸಿದ ಜೆಡಿಎಸ್​, ಮೈತ್ರಿಕೂಟದ ಅಂಗ ಪಕ್ಷವಾದ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲಿದ್ದು, ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಪಡೆಯಲಿದೆ ಎಂದು ತಿಳಿಸಿದೆ.

ಇದರೊಂದಿಗೆ ಜಯನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಯಿಂದ ನಿಧನರಾದ ವಿಜಯಕುಮಾರ್ ಅವರ ಸೋದರ ಪ್ರಹ್ಲಾದ್ ಕಣಕ್ಕಿಳಿದಿದ್ದಾರೆ.

Next Story

RELATED STORIES