ಸ್ಟಾರ್ ಆಟಗಾರನಿಗೇ ಟೆಸ್ಟ್ ಭಯ..?

X
TV5 Kannada5 Jun 2018 5:56 AM GMT
[story-lines]ಮುಂಬೈ; ಮುಂಬರುವ ಟೀಂ ಇಂಡಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ನಲ್ಲಿ ವಿಕೆಟ್ ಪಡೆಯದೇ ಇರುವ ಬಗ್ಗೆ ಅಫ್ಘಾನಿಸ್ಥಾನ್ ಕ್ರಿಕೆಟ್ ತಂಡದ ಆಟಗಾರ ರಶೀದ್ ಖಾನ್ಗೆ ಆತಂಕ ಶುರುವಾಗಿದೆ. ಮೊನ್ನೆ ಐಪಿಎಲ್ನಲ್ಲಿ ಘಟಾನುಘಟಿ ಬ್ಯಾಟ್ಸ್ ಮನ್ಗಳನ್ನ ಧರೆಗುರುಳಿಸಿ ರಾತ್ರೋ ರಾತ್ರಿ ಹೀರೋ ಆಗಿದ್ದ ಅಫ್ಘಾನಿಸ್ಥಾನ್ ತಂಡದ ಸ್ಟಾರ್ ಅಟಗಾರ ರಶೀದ್ ಖಾನ್ಗೆ ಟೆಸ್ಟ್ ಭಯ ಶುರುವಾಗಿದೆ. ಈ ಐತಿಹಾಸಿಕ ಪಂದ್ಯ ನನ್ನ ತಾಳ್ಮೆಯನ್ನ ಪರೀಕ್ಷಿಸಲಿದೆ. ನಾನು ಮೂಲತಃ ಟೆಸ್ಟ್ ಕ್ರಿಕೆಟಿಗನಾಗಿರುವುದರಿಂದ ಸೀಮಿತ ಓವರ್ ಮತ್ತು ಟೆಸ್ಟ್ ನಡುವೆ ಅಂಥ ವ್ಯತ್ಯಾಸ ಕಾಣುತ್ತಿಲ್ಲ ಎಂದು ಚುಟಕು ಕ್ರಿಕೆಟ್ನ ನಂ. 1 ಬೌಲರ್ ರಶೀದ್ ಹೇಳಿದ್ದಾರೆ.
Next Story