ಬೀದರ್ನಲ್ಲಿ ಅರ್ಧಗಂಟೆಯಲ್ಲೇ ಎರಡು ಕಡೆ ದರೋಡೆ

ಬೀದರ್ : ಅರ್ಧಗಂಟೆಯಲ್ಲೇ ಎರಡು ಕಡೆ ರಾಬರಿ ನಡೆದ ಘಟನೆ ಬೀದರ್ ನಲ್ಲಿ ನಡೆದಿದೆ. ಬೀದರ್ ಜಿಲ್ಲಾ ಎಸ್ಪಿ ದೇವರಾಜ್ ನಿವಾಸದ ಬಳಿ ನಡೆದ್ರೆ ಗುಂಪಾ ಬಳಿ ಮತ್ತೊಂದು ರಾಬರಿ ನಡೆದಿದೆ.
ಇಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಅನೀಲ್ ಕುಮಾರ್ ಎಂಬುವರು ಜಿಲ್ಲಾಎಸ್ಪಿ ದೇವರಾಜ್ ನಿವಾಸದ ಬಳಿಯಿಂದ ವಾಕಿಂಗ್ ಮಾಡುವ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಮೂರು ಜನರ ತಂಡ ಅನೀಲ್ ಕುಮಾರ್ ಎಂಬವರನ್ನ ಅಡ್ಡಗಟ್ಟಿ ಮೊಬೈಕ್ ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಇನ್ನು ಗುಂಪಾಬಳಿ ಆಡಪ್ಪ ಎಂಬುವರು ತಮ್ಮ ಮನೆಯವರನ್ನ ಕೆಲಸಕ್ಕೆ ಬಿಟ್ಟು ಬರುವ ಸಂಧರ್ಭದಲ್ಲಿ ಬೈಕ್ ನಲ್ಲಿ ಬಂದ ಮೂರು ಜನ್ರ ತಂಡ ಅವ್ರನ್ನ ಅಡ್ಡಗಟ್ಟಿ ಬೀಡಿ ಕೇಳುವ ನೆಪದಲ್ಲಿ ಹಲ್ಲೆ ಮಾಡಿ ಅವ್ರ ಬಳಿಯಿದ್ದ ಽಸಾವಿರ ನಗದು ಹಾಗೂ ಒಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯವಾವಳಿಗಳು ಸಿಸಿಟಿವಿಯಲ್ಲಿ ಸೇರೆಯಾಗಿದೆ.
ಈ ರಾಬರಿ ವಿಚಾರ ತಿಳಿದ ಗಾಂಧೀಗಂಜ್ ಪೊಲೀಸ್ರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ರು. ಎರಡು ಪ್ರಕರಣಗಳು ಒಂದೇ ಕಡೆ ದಾಖಲಾಗಿದ್ದು, ಸಿಸಿಟಿವಿಯನ್ನ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸ್ರು ತೀವ್ರಶೋಧ ನಡೆಸಿದ್ದಾರೆ. ಜಿಲ್ಲಾ ಎಸ್ಪಿ ಮನೆ ಬಳಿಯೇ ಅನೀಲ್ ಕುಮಾರ್ ಎಂಬುವ ರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಎಸ್ಪಿ ಮನೆ ಬಳಿಯಿದ್ದ ಪೊಲೀಸ್ರು ಯಾರು ಸಹಾಯಕ್ಕೆ ಬಾರದೇ ಇರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡೆಸಿದ್ರು.