Top

#ViralVideo : ಮಂಗಳೂರಿನಲ್ಲಿ ದೆವ್ವ ಪತ್ತೆ : ಆಶ್ಚರ್ಯವೇ..? ಈ ಸುದ್ದಿ ಓದಿ

#ViralVideo : ಮಂಗಳೂರಿನಲ್ಲಿ ದೆವ್ವ ಪತ್ತೆ : ಆಶ್ಚರ್ಯವೇ..? ಈ ಸುದ್ದಿ ಓದಿ
X

ಮಂಗಳೂರು : ಇಂದು ದೆವ್ವ ಇದೆ ಅಂದ್ರೆ ನಂಬೋರು ಕಡಿಮೆ. ದೆವ್ವದ ಬಗ್ಗೆ ಹೇಳಿದ್ರೆ ಯಾರನ್ನೇ ಕೇಳಿದ್ರು, ಇದೆಲ್ಲಾ ಸುಳ್ಳು, ಇದೆಲ್ಲಾ ಭ್ರಮೆ ಎಂಬ ಕಲ್ಪನೆ ಅಂತಾರೆ. ದೆವ್ವ ಇರುವಿಕೆಯ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟ ನಿದರ್ಶನಗಳು ಸಿಕ್ಕಿಲ್ಲ. ಯಾರೂ ಕಂಡವರು ಇಲ್ಲ ಅಂತಾರೆ. ಆದ್ರೇ ನೀವು ನಂಬಲೇ ಬೇಕು.. ಈ ಕೆಳಗಿನ ವೀಡಿಯೋ ನೋಡಿದ ಮೇಲೆ ನೀವು ಇದು ನಿಜ ಅನ್ನಲೇ ಬೇಕು.. ಕ್ಷಣಕಾಲ ಬಿಡುವು ಮಾಡಿಕೊಂಡು ಈ ಕೆಳಗಿನ ವೀಡಿಯೋ ನೋಡಿ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈ ದೃಶ್ಯ ದಾಖಲಾಗಿದೆ. ಇದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿಗಳು ಇದು ದೆವ್ವದ ಜಹರೆ, ಇದು ನಿಜವಾಗಿ ದೆವ್ವವೇ ಇರಬೇಕು ಎಂದು ಹೇಳುತ್ತಿದ್ದಾರೆ. ಅಲ್ಲದೇ ಖಾಸಗೀ ಆಸ್ಪತ್ರೆಯನ್ನು ಹೊಕ್ಕ ದೆವ್ವದ ಬಗ್ಗೆ ದಿನಕ್ಕೊಂದು ಕತೆ ಹುಟ್ಟಿಕೊಂಡು, ಭಯದ ವಾತಾವರಣವೇ ನಿರ್ಮಾಣವಾಗಿದೆ.

ಹಾಗಾದರೇ ಇದು ದೆವ್ವವೇ..? ಇದು ನಿಜಕ್ಕೂ ದೆವ್ವದ ದೃಶ್ಯವೇ ಎಂದು ವೀಡಿಯೋ ನೋಡಿದ ನೀವು, ನಾವೆಲ್ಲಾ ಸೂಕ್ಷ್ಮಾತಿ ಸೂಕ್ಷ್ಮತೆಯಿಂದ ಗಮನಿಸಬೇಕು. ಸಿಸಿಟಿವಿಯಲ್ಲಿ ದಾಖಲಾದ ಈ ಅನಾಮಿಕ ವ್ಯಕ್ತಿಯನ್ನು ಹೋಲುವ ದೃಶ್ಯವನ್ನು ವಿವಿಧ ಹೋರೆಗಳಿಂದ ಹೋರೆ ಹಚ್ಚಿ ನೋಡಬೇಕು. ದೆವ್ವ ಆಗಿದ್ದರೇ, ಹೀಗೆ ಯಾಕೆ ವ್ಯಕ್ತಿಗಳು ಹತ್ತಿದ ಹಾಗೆ ಕಂಬ ಹಿಡಿದು ಹತ್ತುತ್ತೆ ಎಂಬುದು ಮೊದಲ ಪ್ರಶ್ನೆ.

ಇನ್ನೂ ಕಂಬ ಹತ್ತಿ ತೆರಳುವ ಈ ದೃಶ್ಯದಲ್ಲಿನ ದೆವ್ವ, ಬಚ್ಚಿಟ್ಟುಕೊಂಡು ಹೋಗುವಂತೆ ಹೋಗುತ್ತದೆ. ಹಾಗಾದರೇ ಇದು ದೆವ್ವವೋ ಅಥವಾ ವ್ಯಕ್ತಿಯೋ..? ಈ ಬಗ್ಗೆ ಇನ್ನೂ ತಿಳಿಯಬೇಕಿದೆ. ಅಂದಹಾಗೇ ದೆವ್ವ ಹೀಗೆಲ್ಲಾ ಯಾಕ್‌ ಆಸ್ಪತ್ರೆ ಹೊಕ್ಕುತ್ತೆ.? ಆಸ್ಪತ್ರೆ ಒಳಗೆ ಹೋದ್ರು, ದೆವ್ವಕ್ಕೆ ಭಯವೇಕೆ..? ಈ ಮೊದಲಾದ ಅನುಮಾನಗಳಿಗೂ ಎಡೆಮಾಡಿಕೊಡುತ್ತದೆ.

ಆದ್ರೇ, ಇದು ದೆವ್ವವೇ, ಇದು ದೇವ್ವದ ಚಮತ್ಕಾರವೇ ಎಂಬುದು ಅನೇಕರ ಮಾತು. ಅದೇನೇ ಆದ್ರೂ ಮಂಗಳೂರಿನ ಖಾಸಗಿ ಆಸ್ಪತ್ರೆಯ ಒಳಹೊಕ್ಕ ದೆವ್ವ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ಎಲ್ಲರ ಮೊಬೈಲ್‌ನಲ್ಲಿ ಸರ ಸರ ಅಂತ ಹರಿದಾಡುವ ಮೂಲಕ, ಮಂಗಳೂರು ದೆವ್ವದ ವೀಡಿಯೋ ಆಗಿ ಹೊಸ ಟ್ರೆಂಡ್‌ ಶುರುಮಾಡಿದೆ. ಈ ಮೂಲಕ ಜನರಿಗೆ ಒಂದೆಡೆ ಮನರಂಜನೆ ಕೊಟ್ರೆ, ಮತ್ತೊಂದೆಡೆ ಭಯವನ್ನು ಹುಟ್ಟಿಸುತ್ತಿದೆ.

Next Story

RELATED STORIES