Top

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ: ಬಟ್ಟೆ ಬಿಚ್ಚದಿದ್ದರೆ ಸ್ನೇಹಿತರನ್ನು ಕರೆಸಿ ಸಾಮೂಹಿಕ ಅತ್ಯಾಚಾರದ ಬೆದರಿಕೆ ಹಾಕಿದ ಓಲಾ ಕ್ಯಾಬ್ ಚಾಲಕ

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ: ಬಟ್ಟೆ ಬಿಚ್ಚದಿದ್ದರೆ ಸ್ನೇಹಿತರನ್ನು ಕರೆಸಿ ಸಾಮೂಹಿಕ ಅತ್ಯಾಚಾರದ ಬೆದರಿಕೆ ಹಾಕಿದ ಓಲಾ ಕ್ಯಾಬ್ ಚಾಲಕ
X

ಬೆಂಗಳೂರು ಯುವತಿಯರಿಗೆ ಸೇಫ್​ ಅಲ್ಲ ಅನ್ನೋದು ಮತ್ತೊಮ್ಮೆ ಸಾಬಿತಾಗಿದೆ. ಮನೆಗೆ ಹೋಗುವ ಆತುರದಲ್ಲಿ ಯುವತಿಯನ್ನು ಅಡ್ಡದಾರಿಯಲ್ಲಿ ಕರೆದೊಯ್ಯುತ್ತೇನೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಓಲಾ ಕ್ಯಾಬ್ ಚಾಲಕ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದೂ ಅಲ್ಲದೇ ಫೋಟೋ ತೆಗೆಯುತ್ತೇನೆ. ಬಟ್ಟೆ ಬಿಚ್ಚು. ಇಲ್ಲದಿದ್ದರೆ ಸ್ನೇಹಿತರನ್ನು ಕರೆಸಿ ಸಾಮೂಹಿಕ ಅತ್ಯಾಚಾರ ಮಾಡಿಸ್ತೀನಿ ಎಂದು ಬೆದರಿಕೆ ಒಡ್ಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುವತಿಯ ಸಮಯಪ್ರಜ್ಞೆಯಿಂದ ಅರುಣ್ ಎಂಬ ಓಲಾ ಕ್ಯಾಬ್ ಚಾಲಕ ಈ ಕೃತ್ಯ ಎಸಗಿದ್ದು, ಕೂಡಲೇ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್​ ಆಯುಕ್ತರ ಮೇರೆಗೆ ದೂರು ದಾಖಲಿಸಿಕೊಂಡ ಪೊಲೀಸರು ಕೆಲ ಗಂಟೆಗಳಲ್ಲೇ ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ.

ಜೂನ್ 1ರಂದು ಮುಂಬೈಗೆ ಹೋಗುವ ಸಲುವಾಗಿ ವಿಮಾನ ಏರಲು ತರಾತುರಿಯಲ್ಲಿದ್ದ 26 ವರ್ಷದ ಯುವತಿ ಕೆಂಪೇಗೌಡ ಅಂತಾ​ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಡಿಹಳ್ಳಿಯಿಂದ ಓಲಾ ಬುಕ್​ ಮಾಡಿದ್ದಳು. ಲೊಕೇಷನ್​ಗೆ ಬಂದವನೇ ಸಂತ್ರಸ್ತೆ ಇರುವ ಮನೆಯ ಬಳಿ ಅರೆ ಬರೆ ಬಟ್ಟೆ ಧರಿಸಿದ್ದ ಒಂದಷ್ಟು ಜನ ಹುಡುಗಿಯರನ್ನ ನೋಡಿದ್ದ. ನಂತರ ಯುವತಿಯನ್ನ ಪಿಕ್​ ಮಾಡಿದವನೇ ಟೋಲ್​ ಅವಾಯ್ಡ್​ ಮಾಡ್ತಿನಿ. ಬೇಗನೇ ಕರೆದೊಯ್ಯುತ್ತೇನೆ ಎಂದು ಬೇರೆ ದಾರಿಗೆ ವಾಹನ ತಿರುಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ.

ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಟ್ಟೆ ಬಿಚ್ಚು ಫೋಟೋ ತೆಗೆಯುತ್ತೇನೆ. ಇಲ್ಲದಿದ್ದರೆ ಸ್ನೇಹಿತರನ್ನು ಕರೆಸಿ ಸಾಮೂಹಿಕ ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಸಿದ್ದಾನೆ.

ನಂತರ ಯುವತಿ ಕಿರುಚಾಡಿ ಅವನನ್ನ ಈಕೆಯೇ ಪುಸಲಾಯಿಸಿ ಏರ್​ ಪೋರ್ಟ್​ಗೆ ತೆರಳಿ ಮುಂಬೈಗೆ ತಲುಪಿದ್ದಾಳೆ. ಅಲ್ಲಿ ತನ್ನ ತಂದೆಗೆ ವಿಷಯ ಮುಟ್ಟಿಸಿದಾಗ ಅವರು ನೇರವಾಗಿ ಬೆಂಗಳೂರು ಪೊಲೀಸ್​ ಆಯುಕ್ತರಿಗೆ ಈ ಮೇಲ್​ ಮುಖಾಂತರ ದೂರು ನೀಡಿದ್ದಾರೆ. ತಕ್ಷಣ ಅಲರ್ಟ್​ ಆದ ಪೊಲೀಸರು ಆರೋಪಿಯ ಲೊಕೇಷನ್​ನ್ನು ಟ್ರೇಸ್​ಗೆ ಹಾಕಿದಾಗ ಆತನಿಗೆ ನಿರಂತರವಾಗಿ ಟ್ರಿಪ್​ಗಳು ಬಂದಿದೆ. ತನ್ನ ಹೆಂಡತಿಗೆ ಹುಷಾರಿಲ್ಲದ ಕಾರಣ ಅಂದು ನಿರಂತವಾಗಿ ಕೆಲಸ ಮಾಡಿದ್ದ. ಕೊನೆಗೆ ಕೊಡಿಹಳ್ಳ ಬಳಿ ಬಂದಾಗ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಈತನ ಕುಟುಂಬ ಸಾಕಷ್ಟು ತೊಂದರೆಯಲ್ಲಿದ್ದು , ಈತನ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿದೆ . ಅಂತದ್ರಲ್ಲಿ ಅರುಣ್​ ಈ ರೀತಿ ಮಣ್ಣು ತಿನ್ನುವ ಕೆಲಸ ಮಾಡಿಕೊಂಡಿದ್ದು ದುರಂತವೇ ಸರಿ . ಸದ್ಯ ಜೀವನ್​ ಭೀಮಾನಗರ ಪೊಲೀಸರು ದೂರು ದಾಖಲಿಸಿ ತನಿಕೆ ನಡೆಸುತ್ತಿದ್ದಾರೆ.

Next Story

RELATED STORIES