Top

500 ಕೋಟಿ ಬಿಟ್ ಕಾಯಿನ್ ವಂಚನೆ ಬಯಲು: 25000 ಜನರಿಗೆ ವಂಚನೆ

500 ಕೋಟಿ ಬಿಟ್ ಕಾಯಿನ್ ವಂಚನೆ ಬಯಲು: 25000 ಜನರಿಗೆ ವಂಚನೆ
X

ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡುವ ಕಾಲಘಟ್ಟದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಮುಂಬೈನ ಥಾಣೆ ಪೊಲೀಸರು 500 ಕೋಟಿ ರೂ. ಡಿಜಿಟಲ್ ಕರೆನ್ಸಿ (ಬಿಟ್ ಕಾಯಿನ್​) ವಂಚನೆ ಪ್ರಕರಣವನ್ನು ಭೇದಿಸಿದೆ.

ಮನಿ ಟ್ರೇಡ್ ಕಂಪನಿ ಹೆಸರಿನಲ್ಲಿ ಸುಮಾರು ಒಂದು ವರ್ಷದಿಂದ ಡಿಜಿಟಲ್ ಕರೆನ್ಸಿ ದಂಧೆ ನಡೆಯುತ್ತಿದ್ದು, ಉತ್ತಮ ಆದಾಯದ ಭರವಸೆ ಹಿನ್ನೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಈ ಕಂಪನಿಯಲ್ಲಿ ಹಣ ಹೂಡಿದ್ದರು. ಪ್ರಕರಣ ಸಂಬಂಧ ಥಾಣೆ ಪೊಲೀಸರು ಮುಂಬೈ ಮೂಲದ ತಾಹಾ ಕಾಜಿ ಎಂಬಾತನನ್ನು ಬಂಧಿಸಿದ್ದಾರೆ.

ಹಣಕಾಸು ಸಚಿವರ ಸಂಬಂಧಿ ಎಂದು ಹೇಳಿಕೊಂಡ ದುಷ್ಕರ್ಮಿಗಳು, ನಕಲಿ ಐಡಿ ಕಾರ್ಡ್​ಗಳನ್ನು ಸೃಷ್ಟಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರು ಎಂದು ಥಾಣೆ ಪೊಲೀಸ್ ಆಯುಕ್ತ ಪರಮ್ ಭೀರ್ ಸಿಂಗ್ ವಿವರಿಸಿದ್ದಾರೆ.

Next Story

RELATED STORIES