Top

ವೇಶ್ಯಾವಾಟಿಕೆ ಜಾಲದಲ್ಲಿ ತಮಿಳು ಚಿತ್ರ ನಟಿ: ಬಂಧನ

ವೇಶ್ಯಾವಾಟಿಕೆ ಜಾಲದಲ್ಲಿ ತಮಿಳು ಚಿತ್ರ ನಟಿ: ಬಂಧನ
X

ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ಪಾತ್ರ ಕೊಡಿಸುವ ನೆಪದಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದ ತಮಿಳು ಚಿತ್ರನಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳು ಚಿತ್ರನಟಿ ಸಂಗೀತಾ ಬಾಲನ್ ಚೆನ್ನೈನಲ್ಲಿ ಬಂಧಿಸಲಾಗಿದೆ. ಸಂಗೀತಾ ಬಾಲನ್ ಜೊತೆ ಆತನ ಸಹಪಾಠಿ ಸತೀಶ್​ನನ್ನು ಕೂಡ ಬಂಧಿಸಲಾಗಿದ್ದು, ಇವರಿಬ್ಬರು ತಮಿಳುನಾಡು ಅಲ್ಲದೇ ಇತರೆ ರಾಜ್ಯಗಳಲ್ಲಿ ಕೂಡ ತನ್ನ ಜಾಲ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚಲನಚಿತ್ರ ಹಾಗೂ ಟೀವಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ಆಮೀಷ ಒಡ್ಡಿ ಯುವತಿಯನ್ನು ಬಳಸಿಕೊಳ್ಳಲಾಗುತ್ತಿತ್ತು. ಸಂಗೀತಾ 1996ರಲ್ಲಿ ಬಿಡುಗಡೆಯಾದ ಕರಪ್ಪು ರೋಜಾ (ಕಪ್ಪು ಗುಲಾಬಿ) ಚಿತ್ರದಲ್ಲಿ ನಟಿಸಿದ್ದೂ ಅಲ್ಲದೇ ಹಲವಾರು ಜನಪ್ರಿಯ ಟೀವಿ ಧಾರವಾಹಿಗಳಲ್ಲಿ ನಟಿಸಿದ್ದಾರೆ.

Next Story

RELATED STORIES