ಕೆನಡಾ ಟಿ20 ಟೂರ್ನಿಯಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್

X
TV5 Kannada4 Jun 2018 6:06 AM GMT
[story-lines]ಕೆನಡಾ: ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಟಿ20 ಕೆನಡಾ ಟೂರ್ನಿ ಆಡಲಿದ್ದಾರೆ. ಇದೇ ತಿಂಗಳು ಜೂ.28ರಿಂದ ಆರಂಭವಾಗಲಿರುವ ಚುಟಕು ಟೂರ್ನಿಯಲ್ಲಿ ಸ್ಟೀವ್ ಸ್ಮಿತ್ ಟೂರ್ನಿಯ ಸ್ಟಾರ್ ಆಟಗಾರರಾಗಿದ್ದಾರೆ.ಕಳೆದ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸಿಕ್ಕಿಹಾಕಿಕೊಂಡಿದ್ರು. 12 ತಿಂಗಳ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಡೇವಿಡ್ ವಾರ್ನರ್ ವಿನಿಪೆಗ್ ಹಾವಕ್ಸ್ ಪರ ಆಡಲಿದ್ದಾರೆ. ಸ್ಟೀವ್ ಸ್ಮಿತ್ ಟೊರೆಂಟೊ ನ್ಯಾಷನಲ್ಸ್ ತಂಡದ ಪರ ಆಡಲಿದ್ದಾರೆ.
Next Story