Top

ಶರಪೋವಾ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಸೆರೆನಾ

ಶರಪೋವಾ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಸೆರೆನಾ
X

ಭಾರೀ ಕುತೂಹಲ ಕೆರಳಿಸಿದ್ದ ರಷ್ಯಾದ ಮಾರಿಯಾ ಶರಪೋವಾ ಮತ್ತು ಅಮೆರಿಕದ ಸರೆನಾ ವಿಲಿಯಮ್ಸ್ ನಡುವಿನ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯ ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಿಂದ ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದಾರೆ. ಸ್ಇನಾಯು ಸೆಳೆತದಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದರೊಂದಿಗೆ ಶರಪೋವಾ ವಿರುದ್ಧದ ಪಂದ್ಯದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ಉದ, ಶರಪೋವಾ ನಿರಾಯಸವಾಗಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಹಾಕಿದ್ದಾರೆ.

ಶರಪೋವಾ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಎರಡು ವರ್ಷ ನಿಷೇಧದ ನಂತರ ಶರಪೋವಾ ಈ ಟೂರ್ನಿಗೆ ಮರಳಿದರೆ, ಸೆರೆನಾ ವಿಲಿಯಮ್ಸ್​ ಮದುಗಿನ ಜನ್ಮ ನೀಡಿದ ನಂತರ ಕಣಕ್ಕಿಳಿದ ಮೊದಲ ಟೂರ್ನಿಯಾಗಿತ್ತು. ಇಬ್ಬರೂ ಸಾಂಪ್ರದಾಯಿಕ ಎದುರಾಳಿಗಳು ದೀರ್ಘ ಸಮಯದ ನಂತರ ಎದುರಾಗುತ್ತಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ತಣ್ಣೀರು ಬಿದ್ದಂತಾಯಿತು.

Next Story

RELATED STORIES