Top

ಪ್ರಕಾಶ್ ರೈ ವಿರುದ್ಧ ಸಾ.ರಾ.ಗೋವಿಂದು ವಾಗ್ದಾಳಿ

ಪ್ರಕಾಶ್ ರೈ ವಿರುದ್ಧ ಸಾ.ರಾ.ಗೋವಿಂದು ವಾಗ್ದಾಳಿ
X

[story-lines]ರಜಿನಿಕಾಂತ್​ ಅಭಿನಯದ ಕಾಲಾ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ.ಈಗಾಗ್ಲೇ ಕನ್ನಡಪರ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ಮಾಡ್ತಿದ್ದಾರೆ..ಫಿಲ್ಮ್ ಚೇಂಬರ್ ಕೂಡ ಈ ಸಂಬಂಧ ಪಾಸಿಟಿವ್​ ಆಗಿಯೇ ರೆಸ್ಪಾನ್ಸ್ ಮಾಡಿದ್ದು​ , ಇದೀಗ ಬಹುಭಾಷಾ ನಟ ಪ್ರಕಾಶ್​ ರೈ ಈ ವಿಷಯವಾಗಿ ಮತ್ತೆ ಬೆಂಕಿ ಹಚ್ಚಿದ್ದಾರೆ. ಪ್ರಕಾಶ್​ ರೈ ಜಸ್ಟ್ ಆಸ್ಕಿಂಗ್ ಮೂಲಕ, ಕಾವೇರಿ ಸಮಸ್ಯೆಗೂ ಕಾಲಾ ಸಿನಿಮಾಗೂ ಏನು ಸಂಬಂಧ? ಬಾಚಣಿಗೆ ಬಚ್ಚಿಟ್ರೆ ಮದುವೆ ನಿಂತು ಹೋಗುತ್ತಾ? ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್​ ರೈ ತಮ್ಮ ಟ್ವೀಟ್​ನಿಂದ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..ಇಂದು ಪ್ರಕಾಶ್ ರೈ ಟ್ವೀಟ್​ಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ ಗೋವಿಂದು ಮತ್ತು ನಿರ್ಮಾಪಕ ಭಾಮಾ ಹರೀಶ್ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್​ ರೈ ಮಾತನಾಡಿರೋದು ಸರಿಯಲ್ಲ..ಈ ಹಿಂದೆ ತಮಿಳುನಾಡಿನಲ್ಲಿ ಕಾವೇರಿ ನೀರಿನ ಹೋರಾಟ ನಡೆಯುವಾಗ ಕನ್ನಡ ಸಿನಿಮಾಗಳ ಪ್ರದರ್ಶನ ರದ್ದು ಮಾಡಲಾಗಿತ್ತು..ಆಗ ಎಲ್ಲಿ ಹೋಗಿತ್ತು ಪ್ರಕಾಶ್ ರೈ ಅವರ ಸಿನಿಮಾ ಪ್ರೇಮ ..ಅಂತ ಸಾ.ರಾ ಗೋವಿಂದು , ನಟ ಪ್ರಕಾಶ್ ರೈ ವಿರುದ್ಧ ಕಿಡಿಕಾರಿದ್ದಾರೆ.

Next Story

RELATED STORIES