Top

ಕಾಲ ಬಗ್ಗೆ ಮಾತನಾಡದ ಕಮಲ್​ ಟೀಕಿಸಿದ ಪ್ರಕಾಶ್ ರಾಜ್​

ಕಾಲ ಬಗ್ಗೆ ಮಾತನಾಡದ ಕಮಲ್​ ಟೀಕಿಸಿದ ಪ್ರಕಾಶ್ ರಾಜ್​
X

ರಜನಿಕಾಂತ್ ಅವರ ಕಾಲಾ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸದೇ ಇರುವ ಬಗ್ಗೆ ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಯಾಗಿರುವ ನಟ ಕಮಲ್​ಹಾಸನ್ ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಾವೇರಿ ವಿವಾದದ ಕುರಿತು ಚರ್ಚೆ ನಡೆಸಿದ್ದರು. ಆದರೆ ಇದೇ ವೇಳೆ ಕಾಲಾ ಚಿತ್ರದ ಬಿಡುಗಡೆಗೆ ಅಡ್ಡಿ ಕುರಿತು ಮಾತನಾಡಬೇಕಿತ್ತು ಎಂದರು.

ಕಾವೇರಿ ವಿವಾದದ ನೆಪದಲ್ಲಿ ಯಾವುದೇ ಚಿತ್ರದ ಬಿಡುಗಡೆಗೆ ಅಡ್ಡಿಪಡಿಸುವುದು ಕಾನೂನು ವಿರೋಧಿ ಕೃತ್ಯ. ವಿಶ್ವರೂಪಂ ನಿಷೇಧಿಸುವ ಸಂದರ್ಭದಲ್ಲಿ ಅವರು ಇಡೀ ಚಿತ್ರರಂಗದ ಬೆಂಬಲ ಕೋರಿದ್ದರು. ಯಾವುದೇ ಚಿತ್ರಕ್ಕೂ ಈ ಪರಿಸ್ಥಿತಿ ಬರಬಾರದು. ಕಾಲಾ ಚಿತ್ರದ ಬಗ್ಗೆ ಚರ್ಚಿಸದೇ ಇರುವುದಕ್ಕೆ ವೈಯಕ್ತಿಕ ಕಾರಣ ಇರಬಹುದು ಎಂದು ಪ್ರಕಾಶ್ ರಾಜ್ ಹೇಳಿದರು.

Next Story

RELATED STORIES