ಮಕ್ಕಳಿಗೆ ಬುದ್ಧಿ ಮಾತು ಹೇಳಿದ ಯಶ್

X
TV5 Kannada4 Jun 2018 7:43 AM GMT
[story-lines]ಸ್ಯಾಂಡಲ್ವುಡ್ನ ಹೊಸ ಸಿನಿಮಾ ನಿರ್ಮಲ ಚಿತ್ರದ ಮುಹೂರ್ತ ಇಂದು ನಗರದ ಕೇಂಬ್ರಿಡ್ಜ್ ಸ್ಕೂಲ್ನಲ್ಲಿ ನೆರವೇರಿತು..ನಿರ್ಮಲ ಕಂಪ್ಲೀಟ್ ಮಕ್ಕಳ ಸಿನಿಮಾ ಆಗಿದ್ದು, ಹಳ್ಳಿಗಳಲ್ಲಿನ ಶೌಚಾಲಯ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವಂತ ಚಿತ್ರ ಇದಾಗಿದೆ..ಅಂದ್ಹಾಗೇ ಈ ಚಿತ್ರದ ವಿಶೇಷತೆ ಅಂದ್ರೆ ಈ ಚಿತ್ರದ ನಿರ್ದೇಶಕ, ಕಲಾವಿದರು.ಕೋರಿಯೋಗ್ರಾಫರ್, ಕಾಸ್ಟ್ಯೂಮ್ ಡಿಸೈನರ್ ಸೇರಿದಂತೆ ಎಲ್ಲರೂ ಈಗಷ್ಟೇ ಹೈಸ್ಕೂಲ್ ಓದುತ್ತಿರುವ ಮಕ್ಕಳು. ಈ ಮಕ್ಕಳ ಹೊಸ ಪ್ರಯತ್ನಕ್ಕೆ ನಿರ್ಮಾಪಕ ಭಾಮಾ ಹರೀಶ್ ಪುತ್ರ ಉಲ್ಲಾಸ್ ಗೌಡ ಬಂಡವಾಳ ಹಾಕ್ತಿದ್ದು,ನಟ ರಾಕಿಂಗ್ ಸ್ಟಾರ್ ಯಶ್ ಚಿತ್ರಕ್ಕೆ ಚಾಲನೆ ನೀಡಿದ್ರು..ಇದೇ ಸಂದರ್ಭದಲ್ಲಿ ಮಕ್ಕಳ ಜೊತೆ ತಮ್ಮದೇ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಯಶ್ ಇಂದಿನ ಮಕ್ಕಳೇ ಮುಂದಿನ ನಮ್ಮ ದೇಶದ ಭವಿಷ್ಯ, ಜಾತಿ ಎನ್ನುವ ಬೀಜ ನಿಮ್ಮಲ್ಲಿ ಮೊಳಕೆಯೊಡೆಯದಿರಲಿ ಅಂತ ಕಿವಿ ಮಾತನ್ನ ಹೇಳಿದ್ರು.
Next Story