ಸ್ಯಾಂಡಲ್ವುಡ್ನ ಸ್ಟಾರ್ ನಟರಿಗೆ ಸವಾಲ್ ಹಾಕಿದ ಕಿಚ್ಚ ಸುದೀಪ್

[story-lines]ಬಣ್ಣದ ಲೋಕದಲ್ಲಿ ನಟ-ನಟಿಯರು ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ಬಗ್ಗೆ ತುಂಬಾನೇ ಕಾಳಜಿ ವಹಿಸ್ತಾರೆ.. ಪ್ರತಿನಿತ್ಯ ತಪ್ಪದೇ ಜಿಮ್-ವರ್ಕೌಟ್, ಅಷ್ಟೆ ಯಾಕೆ ತಿನ್ನೋ ಆಹಾರವನ್ನು ಕೂಡ ಕಟ್ಟು ನಿಟ್ಟಾಗಿ ಪಾಲಿಸ್ತಾರೆ.. ಇನ್ನು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ತಾರೆಯರು ಸದಾ ಮುಂದು.. ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಕರೆ ಕೊಟ್ಟಿರುವ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಅಭಿಯಾನ ಸದ್ಯ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸಿದೆ..
ಈ ಅಭಿಯಾನಕ್ಕೆ ಈಗಾಗಲೇ ಇಂಡಿಯನ್ ಕ್ರಿಕೆಟ್ ಟೀಂನ ಕ್ಯಾಪ್ಟನ್ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ, ಸಂಸದ ಕಿರಣ್ ರಿಜು, ನಟ ಹೃತಿಕ್ ರೋಷನ್ ಸೇರಿ ಸಾಕಷ್ಟು ಜನರು ಇದಕ್ಕೆ ಸಾಥ್ ಕೊಟ್ಟಿದ್ದು, ಚಾಲೆಂಜ್ನ ಕೂಡ ಸ್ವೀಕಾರ ಮಾಡಿ ತಮ್ಮ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.. ಈಗ ಫಿಟ್ನೆಸ್ ಚ್ಯಾಲೆಂಜ್ಗೆ ಕಿಚ್ಚನ ಸರದಿ.. ಕನ್ನಡದ ಕ್ರಿಕೆಟರ್ ವಿನಯ್ ಕುಮಾರ್ ಹಾಕಿದ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ಸ್ವೀಕರಿಸಿರುವ ಕಿಚ್ಚ ಟ್ವಿಟರ್ನಲ್ಲಿ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ವಿನಯ್ ಕುಮಾರ್ ಚಾಲೆಂಜ್ ಗೆ ಸ್ಪಂದಿಸಿದ್ದಾರೆ.. ಜೊತೆಗೆ ಪತ್ನಿ ಪ್ರಿಯಾ , ಶಿವಣ್ಣ , ಯಶ್ , ಬಾಲಿವುಡ್ ನಟ ಸೊಹೈಲ್ ಖಾನ್, ರಿತೇಶ್ ದೇಶಮುಖ್ಗೂ ಕೂಡ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ಹಾಕಿದ್ದಾರೆ..
ಈಗಾಗಲೇ ಕ್ರಿಕೆಟ್ ಆಟಗಾರರು, ಸಿನಿಮಾ ಮಂದಿ, ರಾಜಕಾರಣಿಗಳು ಸೇರಿದಂತೆ ಹಲವಾರು ಈಗಾಗಲೇ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಸದ್ಯ ಕಿಚ್ಚ ಹಾಕಿದ ಚಾಲೆಂಜ್ ನ್ನು ಪತ್ನಿ ಪ್ರಿಯಾ, ಯಶ್ , ಶಿವಣ್ಣ , ರಿತೇಶ್ ದೇಶಮುಖ್ , ಸೊಹೈಲ್ ಸ್ವೀಕರಿಸಿ ತಮ್ಮ ವಿಡಿಯೋಗಳನ್ನ ಎಂದು ಅಪ್ಲೋಡ್ ಮಾಡುವರೋ ಅಂತಾ ಕಾದು ನೋಡಬೇಕು .