Top

ಕರ್ನಾಟಕದಲ್ಲಿ `ಕಾಲ'ಗೆ ಕಂಟಕ: ಭದ್ರತೆ ಕೋರಿದ ಧನುಷ್​, ಐಶ್ವರ್ಯ

ಕರ್ನಾಟಕದಲ್ಲಿ ಕಾಲ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರೂ ಆದ ನಟ ರಜನಿಕಾಂತ್ ಅಳಿಯ ಧನುಷ್ ಮತ್ತು ಪುತ್ರಿ ಐಶ್ವರ್ಯ ಭದ್ರತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇದೇ ತಿಂಗಳಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶಿಸುವ ಚಿತ್ರ ಮಂದಿರ, ನಿರ್ದೇಶನ, ನಿರ್ಮಾಪಕ, ನಾಯಕ ಸೇರಿದಂತೆ ಚಿತ್ರ ತಂಡಕ್ಕೆ ಭದ್ರತೆ ನೀಡಲು ನಿರ್ದೇಶನ ನೀಡುವಂತೆ ಕೋರಿ ಮನವಿ ಮಾಡಲಾಗಿದೆ.

ವೆಂಡರ್ ಬಾರ್ ಫಿಲ್ಮ್ಸ್ ಕಾಲಾ ಚಿತ್ರವನ್ನು ನಿರ್ಮಿಸಿದ್ದು, ಚಿತ್ರ ಪ್ರದರ್ಶನ ವಿರೋಧ ಸಂವಿಧಾನ ವಿರೋಧಿಯಾಗಿದೆ. ಚಿತ್ರ ಬಿಡುಗಡೆ ರಾಜ್ಯ ಸರ್ಕಾರ, ಗೃಹ ಇಲಾಖೆ, ಡಿಜಿಐಜಿ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸುವಂತೆ ಕೋರಲಾಗಿದೆ.

ಸೇಟ್ರಲ್ ಬೋರ್ಡ್ ಫಿಲ್ಮ್ ಸರ್ಟಿಫಿಕೇಟ್, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿಗಳನ್ನು ಮಾಡಲಾಗಿದೆ. ಚಿತ್ರ ಬಿಡುಗಡೆ ಅವಕಾಶ ನೀಡುವುದಿಲ್ಲವೆಂದು ಸಾ.ರಾ.ಗೋವಿಂದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

Next Story

RELATED STORIES