ಸೀತೆ ಪಾತ್ರದಲ್ಲಿ ಗ್ಲಾಮರ್ ಬೊಂಬೆ ಐಂದ್ರಿತಾ!

ಸ್ಯಾಂಡಲ್ವುಡ್ನ ಗ್ಲಾಮರ್ ಗೊಂಬೆ ಐಂದ್ರಿತಾ ರೇ ಸಿನಿಮಾರಂಗದಿಂದ ದೂರ ಉಳಿದು, ಬೇಸಿಗೆ ಕಾಲದಲ್ಲಿ ಮೂಕ ಪ್ರಾಣಿಗಳಿಗೆ ನೀರು- ಆಹಾರ ಒದಗಿಸುವ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಸುದ್ದಿಯಾಗಿದ್ರು.. ಇದೀಗ ಈ ಗ್ಯಾಮ್ ಡಾಲ್ ಮತ್ತೆ ಸುದ್ದಿಯಾಗಿದ್ದಾರೆ.
ಆದ್ರೆ ಜಾಗೃತಿ ಮೂಡಿಸುವ ವಿಷಯಕ್ಕೆ ಅಲ್ಲ ಬದಲಿಗೆ ಮತ್ತೆ ಬಣ್ಣ ಹಚ್ಚುವ ಮೂಲಕ ಸುದ್ದಿಯಾಗಿದ್ದಾರೆ.. ಚೌಕ, ಮೇಲುಕೋಟೆ ಮಂಜ ಚಿತ್ರಗಳ ನಂತರ ನಟಿ ಐಂದ್ರಿತಾ ರೇ ಚಿತ್ರರಂಗದಿಂದ ಕೊಂಚ ದೂರ ಉಳಿದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ರು.. ಈ ಹಿಂದೆ ಎ ಫ್ಲಾಟ್ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಮೊದಲ ಇನ್ನಿಂಗ್ಸ್ ಶುರು ಮಾಡಿದ್ದ ಈ ವಯ್ಯಾರಿ ಹಿಂದಿಯಲ್ಲಿ ಮತ್ತೊಂದು ಸಿನಿಮಾ ಮಾಡುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ.
ವಿಶೇಷ ಅಂದ್ರೆ ಐಂದ್ರಿತಾ ರೇ ಇನ್ನು ಈ ಹೆಸರಿಡದ ಚಿತ್ರದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದಾರೆ. ಇವರಿಗೆ ಜೋಡಿಯಾಗಿ ಸ್ಲಂ ಡಾಗ್ ಮಿಲೇನಿಯರ್ ಖ್ಯಾತಿಯ ಅಂಕುರ್, ರಾಮನಾಗಿ ಅಭಿನಯಿಸುತ್ತಿದ್ದಾರೆ.. ಚಿತ್ರಕ್ಕೆ ಹಾರ್ದಿಕ್ ಗುಜ್ಜರ್ ಌಕ್ಷನ್ ಕಟ್ ಹೇಳುತ್ತಿದ್ದು, ಗುಜರಾತ್ನ ಧಗ ಧಗ ಉರಿಯುವ ಬಿಸಿಲಿನಲ್ಲಿ ಚಿತ್ರಿಕರಣದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ..
ಈ ಚಿತ್ರದಲ್ಲಿ ಬೀದಿ ನಾಟಕ ಮಾಡುವ ರಂಗಭೂಮಿ ಕಲಾವಿದೆಯ ತಂಡದ ಸದಸ್ಯೆಯಾಗಿ, ಆ ತಂಡದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದಾರೆ ಌಂಡಿ.. ಇನ್ನು ಸೀತೆಯ ಪಾತ್ರ ನಿರ್ವಹಿಸಲು ಐಂದ್ರಿತಾ ಸಾಕಷ್ಟು ತಯಾರಿ ನಡೆಸಿದ್ದಾರೆ.. ಸೀತೆಯ ಗಾಂಭೀರ್ಯಾತೆ ಉಳಿಸಿಕೊಳ್ಳಲು ಕಾಟನ್ ಸೀರೆಯನ್ನು ಉಟ್ಟು, ಹೆಚ್ಚು ಮೇಕಪ್ ಇಲ್ಲದೆ, ಹಣೆಗೆ ಕುಂಕುಮ ಇಟ್ಟು ಥೇಟ್ ಸೀತೆಯ ಹಾಗೆ ಕಾಣುತಿದ್ದಾರಂತೆ.. ಅಲ್ಲದೆ ಡೈಲಾಗ್ ಡೆಲಿವರಿಯಲ್ಲೂ ಕೂಡ ಸಾಕಷ್ಟು ತರಬೇತಿ ಪಡೆದುಕೊಳ್ಳುತ್ತಿದ್ದಾರಂತೆ. ಒಟ್ನಲ್ಲಿ ಬಬ್ಲಿ ಹುಡುಗಿಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿರು ಐಂದ್ರಿತಾ ರೇಗೆ ಇಂತಹ ಚಾಲೆಂಜಿಂಗ್ ಪಾತ್ರ ನಿರ್ವಹಿಸುತ್ತಿರುವುದು ಖುಷಿ ತಂದಿದೆ ಅಂತಾರೆ.