Top

ವಿಧಾನಪರಿಷತ್​ಗೆ 11 ಅಭ್ಯರ್ಥಿಗಳ ಅವಿರೋಧ ಆಯ್ಕೆ

ಕರ್ನಾಟಕ ವಿಧಾನಸಭಾ ಚುನಾವಣೆ ಬೆನ್ನಲ್ಲೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಗೊಂದಲ ಇಲ್ಲದೇ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯ 5 ಅಭ್ಯರ್ಥಿಗಳಾದ ರವಿಕುಮಾರ್, ತೇಜಸ್ವಿನಿ ಗೌಡ, ರಘುನಾಥ್, ಕೆಪಿ ನಂಜುಂಡಿ, ರುದ್ರೇಗೌಡ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಲ್ವರು ಅಭ್ಯರ್ಥಿಗಳಾದ ಗೋವಿಂದ ರಾಜು, ಸಿಎಂ ಇಬ್ರಾಹಿಂ, ಅರವಿಂದ್ ಕುಮಾರ್, ಹರೀಶ್ ಕುಮಾರ್ ಮತ್ತು ಜೆಡಿಎಸ್​ನ ಬಿಎಂ ಫಾರೂಖ್ ಮತ್ತು ಎಸ್​.ಐ. ಬೈರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಕುಮಾರಸ್ವಾಮಿ ಸೋಮವಾರ 11 ಅಭ್ಯರ್ಥಿಗಳ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ನಂತರ ಅವಿರೋಧ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು.

ವಿಧಾನಸಭೆ ಸದಸ್ಯರ ಸಂಖ್ಯಾ ಆದಾರದ ಮೇಲೆ 11 ಮಂದಿ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆ ನಡೆಯಿತು.

Next Story

RELATED STORIES