Top

‘ಬಾಸ್’ ಪಟ್ಟಕ್ಕೆ ನಡೀತಿದೆ ಜಟಾಪಟಿ

‘ಬಾಸ್’ ಪಟ್ಟಕ್ಕೆ ನಡೀತಿದೆ ಜಟಾಪಟಿ
X

[story-lines]ಬಾಸ್... ಚಿತ್ರರಂಗದಲ್ಲಿ ಈ ಹೆಸರು ಕೇಳಿದಾಕ್ಷಣ ನೆನಪಾಗೋದೆ ಸೂಪರ್ ಸ್ಟಾರ್ ರಜಿನಿಕಾಂತ್. ಶಿವಾಜಿ ದಿ ಬಾಸ್ ಅನ್ನೋ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್​ನ ರಿಯಲ್ ಬಾಸ್ ಆಗಿ ಅಭಿಮಾನಿಗಳ ಮನ ಗೆದ್ದರು. ಅಲ್ಲಿಂದ ಈಚೆಗೆ ರಜಿನಿಯನ್ನ ತಲೈವಾ ಅನ್ನೋದಕ್ಕಿಂತ ಹೆಚ್ಚಾಗಿ ಬಾಸ್ ಅಂತಲೇ ಕರೆಯೋ ಟ್ರೆಂಡ್ ಶುರುವಾಯ್ತು.

ಅದಾದ ಬಳಿಕ ಶಿವರಾಜ್​ಕುಮಾರ್​ರ ಭಜರಂಗಿ ಸಿನಿಮಾದಲ್ಲಿ ಬಾಸು ನಮ್ ಬಾಸು ಅನ್ನೋ ಹಾಡೊಂದು ಸಖತ್ ಕ್ರೇಜ್ ಹುಟ್ಟಿಸಿತ್ತು. ಹರ್ಷ ನಿರ್ದೇಶನದ ಭಜರಂಗಿಯ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದ್ರೆ, ಬಹದ್ದೂರ್ ಚೇತನ್ ಸಾಹಿತ್ಯವಿತ್ತು. ಚೇತನ್ ಪದಗುಶ್ಚದಲ್ಲಿ ಶಿವಣ್ಣನನ್ನ ಬಾಸ್​ ವರ್ಣನೆ ನಿಜಕ್ಕೂ ಅರ್ಥಪೂರ್ಣ ಅನಿಸಿತ್ತು.

ಇನ್ನು ಇತ್ತೀಚೆಗೆ ತೆರೆಕಂಡ ಯಶ್​ರ ಸಂತು ಸ್ಟ್ರೈಟ್ ಪಾರ್ವಾರ್ಡ್​ ಚಿತ್ರದಲ್ಲೂ ರಾಕಿಂಗ್ ಸ್ಟಾರ್ ಯಶ್​ರನ್ನ ಬಾಸ್ ಆಗಿ ಬಿಂಬಿಸಲಾಗಿತ್ತು. ವಿ ಹರಿಕೃಷ್ಣ ಕಂಫೋಸ್ ಮಾಡಿದ್ದ ಮತ್ತದೇ ಚೇತನ್ ಕುಮಾರ್ ಸಾಹಿತ್ಯವಿದ್ದ ಸೆಲ್ಫ್ ಮೇಡ್ ಶಹಜಾದಾ ಹಾಡಿನಲ್ಲಿ ಯಶ್ ಬಾಸ್ ಆಗಿ ಮಿಂಚಿದ್ರು. ಬ್ಯಾಗ್ರೌಂಡ್​ನಲ್ಲಿ ಬಾಸ್ ಅನ್ನೋ ಪದ ಬಳಸಿ ತುಂಬಾ ಗತ್ತಿನಿಂದ ಹಾಡಿನ ಚಿತ್ರೀಕರಣ ನಡೆದಿತ್ತು. ಅದ್ರಂತೆ ಸಾಂಗ್ ಸಿಕ್ಕಾಪಟ್ಟೆ ಹಿಟ್ ಕೂಡ ಆಯ್ತು.

ಆದ್ರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಾಸ್ ಅಂದಾಕ್ಷಣ ನೆನಪಾಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು, ಗಾಡ್​ ಫಾದರ್ ಇಲ್ಲದೆಯೇ ಇಂಡಸ್ಟ್ರಿಗೆ ಕಾಲಿಟ್ಟ ದಾಸ ದರ್ಶನ್, ಬಾಸ್ ಅನ್ನೋ ಸಿನಿಮಾನೇ ಮಾಡಿದ್ರು. ಅಲ್ಲಿಂದ ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಆಗಿ ಹೊಸ ಪರ್ವ ಶುರು ಮಾಡಿದ್ರು.

ಕನ್ನಡ ಚಿತ್ರರಂಗದಲ್ಲಿ ಹೈಯೆಸ್ಟ್ ಫ್ಯಾನ್ ಫಾಲೋಯಿಂಗ್ ಇರೋ ಸ್ಟಾರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ದರ್ಶನ್. ಅದಕ್ಕೆ ತಕ್ಕನಾಗಿ ಸಕ್ಸಸ್​ಫುಲ್ ಸಿನಿಮಾಗಳನ್ನ ಕೂಡ ದರ್ಶನ್ ಕೊಡ್ತಾ ಬರ್ತಿದ್ದಾರೆ. ಆದ್ರೀಗ ನಿರ್ದೇಶಕ ದುನಿಯಾ ಸೂರಿ ಶಿವಣ್ಣನಿಗೆ ಕೊಟ್ಟ ಹೊಸ ಬಿರುದು ದರ್ಶನ್ ಫ್ಯಾನ್ಸ್​ನ ಕೆರಳಿಸಿದೆ.

ಯೆಸ್, ಇತ್ತೀಚೆಗೆ ಟಗರು ಸಿನಿಮಾ ಶತದಿನೋತ್ಸವ ಆಚರಿಸಿತು. ಆ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಸೆಂಚುರಿಸ್ಟಾರ್ ಅಂತೆಲ್ಲಾ ಬಿರುದುಗಳನ್ನ ಹೊಂದಿದ್ದ ಶಿವಣ್ಣಗೆ, ಸೂರಿ ಬಾಸ್ ಆಫ್ ಸ್ಯಾಂಡಲ್​ವುಡ್ ಅನ್ನೋ ಪಟ್ಟ ಕಟ್ಟಿದರು. ಚಿತ್ರರಂಗದಲ್ಲಿ ಈಗಾಗ್ಲೇ ಡಿ ಬಾಸ್ ಅಂತ ದರ್ಶನ್ ಇದ್ದಾರೆ. ಹೀಗಿರುವಾಗ ಆ ಟೈಟಲ್​ನ ಸೂರಿ ಶಿವಣ್ಣನಿಗೆ ಕೊಟ್ಟಿದ್ದಾದ್ರು ಯಾಕೆ ಅಂತ ದರ್ಶನ್ ಫ್ಯಾನ್ಸ್ ಪ್ರಶ್ನಿಸ್ತಿದ್ದಾರೆ. ಅಷ್ಟೇ ಅಲ್ಲ, ಸೂರಿ ವಿರುದ್ದ ಗರಂ ಆಗಿದ್ದಾರೆ.

ಶಿವಣ್ಣ- ದರ್ಶನ್ ಮಧ್ಯೆ ಯಾವುದೇ ತೊಡಕುಗಳು ಇಲ್ಲವಾದರೂ ಈ ರೀತಿಯ ವಿಚಾರಗಳಿಂದ ಬಿರುಕುಂಟಾಗೋಕೆ ದಾರಿ ಆಗೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಈ ಬಾಸ್ ಕಾಂಟ್ರವರ್ಸಿಗೆ ಖುದ್ದು ಶಿವಣ್ಣ ಅಥ್ವಾ ದರ್ಶನ್ ಅವರೇ ಅಭಿಮಾನಿಗಳಿಗೆ ಸ್ಪಷ್ಟಪಡಿಸಬೇಕು. ಹಾಗಾದಲ್ಲಿ ಮಾತ್ರ ಇದಕ್ಕೆ ಅಂತ್ಯ ಹಾಡಲು ಸಾಧ್ಯವಾಗಲಿದೆ.

Next Story

RELATED STORIES