Top

ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟಿ ಬಿಪಾಶಾ ಬಸು..!

ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟಿ ಬಿಪಾಶಾ ಬಸು..!
X

[story-lines]ಬಾಲಿವುಡ್​ನ ಮೋಹಕ ಚೆಲುವೆ , ಕರಣ್ ಗ್ರೋವರ್ರವರ ಹೃದಯಾಂಗಿನಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಬಿಪಾಶ ಮುಂಬೈನ ಖಾಸಗಿ ಆಸ್ಪತ್ರೆ ಸೇರಿದ್ದಾರೆ. ಕಳೆದ ದಿನ ಬಿಪಾಶಾಗೆ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಆಸ್ಪತ್ರೆಗೆ ಸೇರಿದ್ದಾರೆ.

ಜೀಮ್ , ಯೋಗ ಇತ್ಯಾದಿ ಆರೋಗ್ಯಕರ ಚಟುವಟಿಕೆಯಿಂದ ಬಿಪಾಶ ಫಿಟ್​ ಆಂಡ್ ಫೈನ್ ಅಗಿದ್ದರು.

39 ವರ್ಷವಾದ್ರು 20ರ ತರುಣಿಯಂತೆ ಬಾಲಿವುಡ್​ ಸಿಲ್ವರ್​ ಸ್ಕ್ರೀನ್​ನಲ್ಲಿ ಮಿಂಚುತ್ತಿದ್ರು. ಇಂತಹ ಹೆಲ್ದಿ ವುಮನ್​ಗೆ ಆರೋಗ್ಯ ಕೆಟ್ಟಿರುವುದು ಬಿಟೌನ್​ ಮಂದಿಗೆ ಆಶ್ಚರ್ಯ ಉಂಟು ಮಾಡಿದೆ .

ಆಸ್ಪತ್ರೆಗೆ ದಾಖಲಾದ ಬಗ್ಗೆ ಸ್ವತಃ ಬಿಪಾಶಾರವರೇ ಟ್ವೀಟರ್​​ನಲ್ಲಿ ಪ್ರತಿಕ್ರಿಯೆಸಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಬ್ಯಾಕ್ಟೀರಿಯಾದ ಸೋಂಕಿನಿಂದ ನಾ ಆಸ್ಪತ್ರೆಗೆ ಸೇರುವಂತ್ತಾಯ್ತು. ನಾನು ಈಗ ಆರೋಗ್ಯವಾಗಿದ್ದೇನೆ ಎಂದು ರಾಝ್​ ಬ್ಯೂಟಿ ಸ್ಪಷ್ಟಪಡಿಸಿದ್ದಾರೆ.

Next Story

RELATED STORIES