Top

2019ರ ಚುನಾವಣೆ: ರಾಮ್​ದೇವ್​ ಬೆಂಬಲ ಕೋರಿದ ಶಾ

2019ರ ಚುನಾವಣೆ: ರಾಮ್​ದೇವ್​ ಬೆಂಬಲ ಕೋರಿದ ಶಾ
X

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 50 ಗಣ್ಯರನ್ನು ಭೇಟಿ ಮಾಡಿ ಅವರ ಬೆಂಬಲ ಪಡೆಯುವ ಸಂಪರ್ಕ್ ಫಾರ್​ ಸಮರ್ಥನ್ ಅಭಿಯಾನದಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಬಾಬಾ ರಾಮ್​ದೇವ್ ಅವರನ್ನು ಭೇಟಿ ಮಾಡಿದರು.

[story-lines]

ಬಾಬಾ ರಾಮ್​ದೇವ್ ಅವರನ್ನು ಭೇಟಿ ಮಾಡಿ ಅವರ ಬೆಂಬಲ ಕೋರಿದ್ದೇನೆ. ನಮ್ಮ ಎಲ್ಲಾ ಮಾತುಗಳನ್ನು ಅವರು ತಾಳ್ಮೆಯಿಂದ ಕೇಳಿದ್ದಾರೆ. ನಮ್ಮ ಕೆಲಸದ ಬಗ್ಗೆ ಅವರಿಗೆ ಉಪನ್ಯಾಸ ಮಾಡಿದೆ. ಒಂದು ವೇಳೆ ಅವರು ಬೆಂಬಲ ಘೋಷಿಸಿದರೆ ಅವರ ಕೋಟ್ಯಂತರ ಅಭಿಮಾನಿಗಳು ಕೈ ಜೋಡಿಸಲಿದ್ದಾರೆ ಎಂದು ಭೇಟಿಯ ನಂತರ ಅಮಿತ್ ಶಾ ಹೇಳಿದರು.

2014ರ ಚುನಾವಣೆಯಲ್ಲಿ ನಮ್ಮ ಜೊತೆಗಿದ್ದ ಮುಖಂಡರನ್ನು ಭೇಟಿ ಮಾಡಲಿದ್ದೇವೆ. ಈ ಮೂಲಕ ಲಕ್ಷಾಂತರ ಜನರ ಮನೆಗಳಿಗೆ ನಾವು ಭೇಟಿ ನೀಡಲಿದ್ದೇವೆ ಎಂದು ಶಾ ವಿವರಿಸಿದರು.

ಇದೇ ವೇಳೆ ಅಮಿತ್ ಶಾ, ಮಾಜಿ ಕ್ರಿಕೆಟಿಗ ಕಪಿಲ್ ದೇವ್​, ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಮತ್ತು ಮಾಜಿ ಸೇನಾಧಿಕಾರಿ ಚೀಫ್ ಜನರಲ್ ದಲ್ಬೀರ್ ಸುಹಾಗ್ ಅವರನ್ನು ಭೇಟಿ ಮಾಡಿದರು.

Next Story

RELATED STORIES