Top

ಲೋಕಸಭಾ ಚುನಾವಣೆಗೆ ಬಿಜೆಪಿ ರಣಕಹಳೆ

ಲೋಕಸಭಾ ಚುನಾವಣೆಗೆ ಬಿಜೆಪಿ ರಣಕಹಳೆ
X

[story-lines]ಬಿಜೆಪಿ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಈಗಿನಿಂದಲೇ ಸಜ್ಜಾಗಿದೆ. ಚುನಾವಣಾ ಕಾರ್ಯಕ್ಕೆ ಬಿಜೆಪಿ ಟೀಂ ರಚನೆ ಮಾಡಿದ್ದು, ಈ ಕೆಳಗಿನಂತಿದೆ.

1.ಸುದ್ದಿಗೋಷ್ಟಿ ಸಮಿತಿ:- ಸಂಚಾಲಕ ಸಿ.ಟಿ. ರವಿ, ಸಹ ಸಂಚಾಲಕರಾಗಿ ಅಶ್ವಥನಾರಾಯಣಗೌಡ ಮತ್ತು ಪ್ರಕಾಶ ನೇಮಕ..

2.ಫಲನಾಭವಿಗಳ ಸಭೆ ಸಮಿತಿ:-ಸಂಚಾಲಕರಾಗಿ ಸಂಸದ ಪ್ರಲ್ಹಾದ್ ಜೋಶಿ, ಸಹ ಸಂಚಾಲಕರಾಗಿ ಸಂಸದರಾದ ಭಗವಂತ ಖೂಬಾ, ಪಿ ಸಿ ಮೋಹನ್ ನೇಮಕ..

3.ಚಿಂತಕರ ಸಭೆ ಸಮಿತಿ:- ಸಂಚಾಲಕರಾಗಿ ಸಂಸದೆ ಶೋಭಾ ಕರಂದ್ಲಾಜೆ, ಸಹ ಸಂಚಾಲಕರಾಗಿ ಸಿ.ಎಂ ಉದಾಸಿ ಹಾಗೂ ತಿಂಗಳೇ ವಿಕ್ರಮಾರ್ಜುನ್ ಹೆಗಡೆ..

4.ಗಣ್ಯರ ಸಂಪರ್ಕ ಸಮಿತಿ:- ಸಂಚಾಲಕ ಎಂ.ನಾಗರಾಜ, ಸಹ ಸಂಚಾಲಕ ಖೋಟಾ ಶ್ರೀನಿವಾಸ ಪೂಜಾರಿ, ಸಚ್ಚಿದಾನಂದ ಮೂರ್ತಿ..

5.ಗ್ರಾಮಸಭೆಗಳ ಸಮಿತಿ:- ಸಂಚಾಲಕ ಎನ್.ರವಿಕುಮಾರ, ಸಹ ಸಂಚಾಲಕ ಶಿವಕುಮಾರ, ಗುರುಲಿಂಗನಗೌಡ..

6.ಸ್ವಚ್ಚತಾಭಿಯಾನ ಸಮಿತಿ:- ಸಂಚಾಲಕ ಜಗದೀಶ್ ಹಿರೇಮನಿ, ಸಹ ಸಂಚಾಲಕರಾಗಿ ಸುಭಾಸ್ ರಾಮಪ್ಪ, ಹೆಚ್.ವಿ.ರಾಜು..

7.ಬೈಕ್ ರ್ಯಾಲಿ ಸಮಿತಿ:- ಸಂಚಾಲಕ ಅರವಿಂದ ಲಿಂಬಾವಳಿ, ಸಹ ಸಂಚಾಲಕ ಕರುಣಾಕರ್, ತಮ್ಮೇಶಗೌಡ

8.ಹಿರಿಯ ನಾಗರಿಕರ ಸಂಪರ್ಕ ಸಮಿತಿ:- ಸಂಚಾಲಕ ಶಾಸಕ ಸುರೇಶಕುಮಾರ, ಸಹಸಂಚಾಲಕ ಈರಣ್ಣ ಕರಡಿ, ಉದಯಕುಮಾರ ಶೆಟ್ಟಿ..

9.ಕಚೇರಿ :- ಲೋಕೇಶ್ ಅಂಬೇಕಲ್, ಎಂ.ಎಸ್.ಸುರೇಶ್..

ಇನ್ನು ವಿಧಾನಸಭೆ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಗೆ ಸಿದ್ಧವಾಗಿದೆ.ತೃತೀಯ ರಂಗಕ್ಕೆ ಕರ್ನಾಟಕದಿಂದಲೇ ತಿರುಗೇಟು ನೀಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ೯ ಮಾರ್ಗಗಳ ಮೂಲಕ ಜನರಿಗೆ ಮುಟ್ಟಿಸಲು ನಿರ್ಧರಿಸಿದೆ. ಇದಕ್ಕೆಂದೆ ೯ ವಿಭಾಗಗಳನ್ನು ರಚಿಸಿ ಸಂಚಾಲಕರು ಮತ್ತು ಸಹಸಂಚಾಲಕರನ್ನು ನೇಮಕ ಮಾಡಲಾಗಿದೆ.

ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ರಚಿಸಿರುವ ೯ ವಿಭಾಗಗಳು ಯಾವವು?..

೧- ಜಿಲ್ಲಾವಾರು ಸುದ್ದಿಗೋಷ್ಠಿಗಳನ್ನು ನಡೆಸುವುದು..

೨- ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಒಂದೂಗೂಡಿಸಿ ಸಭೆ ನಡೆಸುವುದು..

೩- ರಾಜ್ಯದ ಚಿಂತಕರನ್ನು ಸಂಪರ್ಕಿಸಿ ಸಭೆ ನಡೆಸುವುದು..

೪- ರಾಜ್ಯದ ಗಣ್ಯರನ್ನು ಸಂಪರ್ಕಿಸಿ ವಿಶ್ವಾಸ ಮೂಡಿಸುವುದು..

೫- ಗ್ರಾಮ ಸಭೆಗಳನ್ನು ನಡೆಸಿ ಗ್ರಾಮೀಣ ಪ್ರದೇಶಗಳಲ್ಲಿ ಮೋದಿ ವರ್ಚಸ್ಸು ಹೆಚ್ಚಿಸುವುದು..

೬- ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯ ಹಮ್ಮಿಕೊಂಡು ಕೇಂದ್ರದ ಸ್ವಚ್ಛ ಭಾರತ್ ಯೋಜನೆ ಕಲ್ಪನೆ ಜಾಗೃತಿಗೊಳಿಸುವುದು..

೭- ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಮೋದಿ ಸಾಧನೆ ಬಿಂಬಿಸುವುದು..

೮- ಹಿರಿಯ ನಾಗರಿಕರ ಸಭೆ ನಡೆಸಿ ಜನರಿಗೆ ವಿಷಯ ತಲುಪಿಸಲು ನಿರ್ಧಾರ..

೯- ಕೇಂದ್ರ ನಾಯಕರ ಕಾರ್ಯಕ್ರಮ ಜೋಡಣೆ..

ಪ್ರತಿ ಸಮಿತಿಗೆ ಪ್ರಮುಖ ಮೂವರು ನಾಯಕರ ನೇತೃತ್ವ..

Next Story

RELATED STORIES