Top

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಬಂಡಿಪುರ ವನ್ಯಜೀವಿ ತಾಣ

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಬಂಡಿಪುರ ವನ್ಯಜೀವಿ ತಾಣ
X

[story-lines]

ಚಾಮರಾಜನಗರ : ಬಂಡೀಪುರ ವನ್ಯಜೀವಿ ತಾಣ, ದೇಶದ ಪ್ರತಿಷ್ಠಿತ ವನ್ಯಜೀವಿ ತಾಣಗಳಲ್ಲೊಂದು. ಇಲ್ಲಿ ಮಳೆಗಾಲ ಬಂತೆಂದರೆ ವನ್ಯಜೀವಿಗಳ ಕಲರವ ನೋಡುವುದೇ ಒಂದು ಭಾಗ್ಯ. ಹಚ್ಚ ಹಸಿರಿನ ಮೈಸಿರಿಯನ್ನು ಹೊದ್ದು ಮಲಗಿರುವ ಪ್ರಕೃತಿ ಮಾತೆಯ ಮಡಿಲ ನಡುವೆ ವೈವಿದ್ಯಮಯ ವನ್ಯಜೀವಿಗಳ ಕಲರವ ನೋಡುವುದಕ್ಕೆ ಎರಡು ಕಣ್ಣು ಸಾಲದು. ಬೆಟ್ಟದ ತುದಿಯಲ್ಲಿ ಸಂಚರಿಸೋ ಹಿಮದ ರಾಶಿ, ತಂಪಾದ ವಾತಾವರಣ, ನೋಡುಗರ, ಪ್ರವಾಸಿಗರ ಸ್ವರ್ಗವೆಂದೆ ಕೆರೆಯಬಹುದಾದ ಅಪರೂಪದ ತಾಣ.

ಹಿಮದರಾಶಿಯ ಸಂಚಾರ

ಹಚ್ಚ ಹಸಿರಿನ ಮೈಸಿರಿ, ಬೆಟ್ಟಗುಡ್ಡ, ಕಣಿವೆಗಳ ಮೂಲಕ ಹಾದು ಹೋಗುವ ರಸ್ತೆ ಮಾರ್ಗ. ವನ್ಯಜೀವಿ ತಾಣಕ್ಕೆ ಪ್ರಯಾಣಿಸುತ್ತಿರುವ ಪ್ರವಾಸಿಗರ ವಾಹನಗಳು. ದಟ್ಟ ಕಾನನದ ನಡುವೇ ಸ್ವಚ್ಛಂದವಾಗಿ ನಲಿದಾಡುತ್ತಿರುವ ವನ್ಯಜೀವಿ ಸಂಕುಲ. ತಲೆ ಎತ್ತಿ ನೋಡೊದರೆ ಬೆಟ್ಟದ ಮೇಲೆ ಹಿಮದರಾಶಿಯ ಸಂಚಾರ. ಅಂದಾಹಾಗೆ ಈ ದೃಶ್ಯ ವೈಭವ ಕಂಡು ಬಂದಿದ್ದು ಬೇರೆಲ್ಲೂ ಅಲ್ಲ ಗಡಿ ಜಿಲ್ಲೆ ಚಾಮರಾಜನಗರದ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ.

ದಕ್ಷಿಣ ಭಾರತದ ಸುಪ್ರಸಿದ್ಧ ಪ್ರವಾಸಿ ತಾಣ

ದಕ್ಷಿಣ ಭಾರತದ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಒಂಡಿಪುರ ರಾಷ್ಟ್ರೀಯ ಉದ್ಯಾನವನದ ವೈಭವವನ್ನು ನಾವು ಹೇಳಲಿಕ್ಕೆ ಹೊರಟಿದ್ದೇವೆ. ದಕ್ಷಿಣ ಬಾರತದ ಕರ್ನಾಟಕ, ಕೇರಳಾ ಮತ್ತು ತಮಿಳುನಾಡು. ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನವು ದೇಶದಲ್ಲಿ ಒಂದು ಅದ್ಭುತ ಮತ್ತು ವೈವಿದ್ಯಮಯವಾದ ಸ್ಥಳ. ಮೊದಮೊದಲು ಇದು ಒಂದು ರಾಷ್ಟ್ರೀಯ ಉದ್ಯಾನವನವಾಗಿತ್ತು. ತದ ನಂತರದಲ್ಲಿ ಹುಲಿಗಳ ಗಣತಿಯನ್ನ ನೋಡಿ 1974 ರಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವೆಂದು ಕೆರೆಯಲಾಯಿತು.

ಬಂಡಿಪುರ ಸರಿಸುಮಾರು 1 ಸಾವರಿದ 50 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು ದಕ್ಷಿಣಕ್ಕೆ ತಮಿಳುನಾಡು ಪಶ್ಚಿಮಕ್ಕೆ ಕೇರಳಾದ ಅರಣ್ಯಪ್ರದೇಶಗಳನ್ನು ಹೊಂದಿಕೊಂಡಿದೆ. ಇದು ಒಂದು ಎಲೆ ಉದುರುವ ಮತ್ತು ಕುರುಚಲು ಸಸ್ಯ ಪ್ರಭೇಧವನ್ನುಳ್ಳ ಪ್ರದೇಶ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಿದ್ರೆ, ಬೇಸಿಗೆಯಲ್ಲಿ ಎಲೆ ಉದುರಿ ಬರಡಾಗಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗು ಸಾಧ್ಯತೆಯೇ ಹೆಚ್ಚು. ಇಂಥಾ ಕಾಡಿನಲ್ಲಿ ನೂರಾರು ಪ್ರಭೇದದ ವೈವಿಧ್ಯಮಯವಾದ ಪ್ರಾಣಿ, ಪಕ್ಷಿ, ಸಸ್ಯಸಂಕುಲಗಳನ್ನು ಕಾಣಬಹುದು.

ಕಾನನದ ನಡುವೇ ಸ್ವಚ್ಛಂದ ವಿಹಾರ

ಮಳೆಗಾಲ ಬಂದಾಗ ಮೈನೆರೆಯೋ ಸಿಂಗಾರಿ. ಚಳಿಗಾಲ ಬಂದಾಗ ಮುಸುಕೆಳೆಯೋ ವೈಯಾರಿ. ಅನ್ನೋ ಹಾಗೆ ಮಳೆಗಾಲದಲ್ಲಿ ಇಲ್ಲಿ ಪ್ರಕೃತಿ ಮಾತೆಯ ಸೊಬಗನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರ್ತಾರೆ. ಅದರಲ್ಲೂ ವೀಕ್ ಎಂಡ್ ಬಂತೆಂದರೆ ಮೈಸೂರು, ಬೆಂಗಳೂರು, ನೆರೆ ರಾಜ್ಯಗಳಾದ ಕೇರಳಾ, ತಮಿಳುನಾಡು ಮತ್ತು ದೇಶದ ನಾನಾ ಭಾಗಗಳಿಂದ ಸಹಸ್ರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತೆ.

ಹೋಗೋದು ಹೇಗೆ.?

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿ ಬಂಡಿಪುರವಿದೆ. ಮೈಸೂರಿಗೆ ಸುಮಾರು 75 ಕಿ.ಮೀ ದೂರದಲ್ಲಿದೆ. ಬಂಡಿಪುರಕ್ಕೆ ಬರಲು ಸಾಕಷ್ಟು ಬಸ್ ವ್ಯವಸ್ಥೆ ಕೂಡ ಇದೆ ಪ್ರವಾಸಿಗರು ಬಂಡಿಪುರಕ್ಕೆ ಬಂದರೆ ಅಲ್ಲಿ ತಂಗಲು ಬಯಸುವವರಿಗೆ ಸುಸಜ್ಜಿತ ರೆಸಾರ್ಟ್‌ಗಳು ಕೂಡ ಇವೆ. ವೀಕೆ ಎಂಡ್ನಲ್ಲಿ ಪ್ಯಾಮಿಲಿ ಸಮೇತ ಬಂಡಿಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿ ಕಾಡಿನ ಮಧ್ಯೆದಲ್ಲೇ ಇರುವ ಹೋಮ್‌ಸ್ಟೇನಲ್ಲಿ ಉಳಿದುಕೊಳ್ಳಬಹುದು. ಹೀಗೆ ಉಳಿದು ಪ್ರಕೃತಿಯ ಸೊಬಗನ್ನು ನೋಡಿ ಹೋಗುವ ವ್ಯವಸ್ಥೆಯನ್ನ ಇಲ್ಲಿನ ಅರಣ್ಯ ಇಲಾಖೆ ಮಾಡಿದೆ.

ವಾರಾಂತ್ಯ ರಜೆಯ ಮಜೆಗೆ ಬೆಸ್ಟ್ ಪ್ಲೇಸ್‌

ಬರುವ ಪ್ರವಾಸಿರಿಗೆ ಬಂಡಿಪುರ ಎಂಟ್ರೆನ್ಸ್ ನಲ್ಲೇ ಟಿಕೇಟ್ ನೀಡಲಾಗುತ್ತದೆ. ಪ್ರವಾಸಿಗರು, ಪರಿಸರ ಪ್ರೇಮಿಗಳು ವಾರಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಕೃತಿಯ ಸೌಂಧರ್ಯ ಸವಿದು ಹೋಗುತ್ತಾರೆ. ವೀಕ್ ಎಂಡ್ ಬಂತೆಂದರೆ ಇಲ್ಲಿ ಎಲ್ಲಿಲ್ಲದ ಪ್ರವಾಸಿಗರ ಜನಸಂದಣೆ. ದೂರದ ಊರುಗಳಿಂದ ಮುಂಗಡವಾಗಿ ಟಕೇಟ್ ಬುಕಿಂಗ್ ಮಾಡಿ, ಇಲ್ಲೇ ವಾಸ್ತವ್ಯ ಮಾಡಿ ಮುಂಜಾನೆಯ ಸಫಾರಿಗೆ ಹೋಗಬಹದು. ಇಲ್ಲಿ ಬರುವ ಪ್ರವಾಸಿರ ಆಸೆ, ಮುಂಜಾನೆ ಎದ್ದು ಸಫಾರಿಗೆ ಅರಣ್ಯ ಇಲಾಖೆ ವಾಹನಗಳಲ್ಲಿ ದಟ್ಟ ಕಾಡಿನ ಮಧ್ಯೆ ಹೊರಟಾಗ ಅಲ್ಲಲ್ಲಿ ಕಾಡು ಪ್ರಾಣಿ, ಪಕ್ಷಿಗಳ ದರ್ಶನ ಪಡೆದು ಪುಳಕಿತರಾಗ್ತಾರೆ.

ತಲಾ 350 ರಂದ 700 ರೂಪಾಯಿವರೆಗೂ ಟಕೇಟ್ ಬೆಲೆ ನಿಗಧಿ

ವೀಕ್ ಎಂಡ್ನಲ್ಲಿ ಇಲ್ಲಿ ಇಡೀ ಬಂಡಿಪುರ ಆವರಣದ ತುಂಬಾ ವಾಹನಗಳು ತುಂಬಿ ತುಳುಕುತ್ತಿರುತ್ತವೆ. ಸಫಾರಿಗೆ ಖಾಸಗೀ ವಾಹನಗಳ ಪ್ರವೇಶ ನಿಷೇದವಿರುವ ಕಾರಣ ಅರಣ್ಯ ಇಲಾಖೆಯವರೇ ವ್ಯವಸ್ಥೆ ಮಾಡಿರುವ ಬಸ್ಸು ಮತ್ತು ಜೀಪುಗಳಲ್ಲಿ ಹೋಗಬೇಕಾಗುತ್ತದೆ. ತಲಾ 350 ರಂದ 700 ರೂಪಾಯಿವರೆಗೂ ಟಕೇಟ್ ಬೆಲೆ ನಿಗಧಿಯಾಗಿದೆ. ಹೊರದೇಶದ ಪ್ರಜೆಗಳಿಗೆ ಟಿಕೆಟ್ ದರದಲ್ಲಿ ವ್ಯತ್ಯಾಸವಿರುತ್ತೆ. ಆದ್ರೂ ಟಿಕೆಟ್ ದರದಲ್ಲಿ ಸ್ವಲ್ಪ ದುಬಾರಿಯಾದ್ರೂ ಕೂಡ ಪ್ರವಾಸಿಗರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ ಹೊರತು ಕಡಿಮೆಯಂತು ಆಗೊದಿಲ್ಲ.

ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆ

ಇತ್ತ ಟಿಕೇಟ್ ತೆಗೆದುಕೊಂಡು ಅರಣ್ಯ ಇಲಾಖೆ ವಾಹನಗಳ ಮೇಲೆ ಕುಳಿತರೇ ಸಾಕು, ದಟ್ಟ ಅರಣ್ಯದ ಒಳಗಡೆ ನಿಮ್ಮ ಪ್ರಯಾಣ ಆರಂಭ. ನಡುವೆ, ದಾರಿ ಮಧ್ಯ ವನ್ಯಜೀವಿಗಳು ಕಣ್ಣಿಗೆ ಬೀಳುತ್ತವೆ. ವಾಹನವನ್ನು ನಿಲ್ಲಿಸಿ ಪ್ರಾಣಿಗಳನ್ನು ತೋರಿಸಿ ಮುಂದೆ ನಿಮ್ಮನ್ನು ಆರಣ್ಯ ಇಲಾಖೆ ಸಿಬ್ಬಂದಿ ಕರೆದೊಯ್ಯುತ್ತಾರೆ. ಈ ವೇಳೆ ಪ್ರವಾಸಿಗರ ಕಣ್ಣಿಗೆ ಜಿಂಕೆಗಳ ಹಿಂಡು, ಆನೆ, ಕಾಡು ಕೋಣ, ಎಮ್ಮೆ, ಹುಲಿಗಳ ದರ್ಶನವೂ ಸಿಗುತ್ತದೆ. ಇಂಥಾ ಸಂದರ್ಭದಲ್ಲಿ ಪ್ರವಾಸಿಗರು ಪುಳಕಿತರಾಗಿ ತಮಗಿಷ್ಟ ಬಂದಹಾಗೆ ಪೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ.

ಪ್ರತಿದಿನ ನೂರಾರು ಪ್ರವಾಸಿಗರ ಭೇಟಿ

ಈ ಬಾರಿ ಕಳೆದ ವರ್ಷಗಳಿಗಿಂತ ಉತ್ತಮ ಮಳೆ ಆಗಿದೆ. ಅಂದರೆ ಮಾನ್ಸೂನ್ ಆರಂಭಕ್ಕೂ ಮನ್ನ ಇಲ್ಲಿಗೆ ಉತ್ತಮ ಮಳೆಯಾದ ಕಾರಣ ಇಡೀ ಬಂಡಿಪುರ ಹಚ್ಚ ಹಸಿರಿಂದ ಕಂಗೊಳಿಸುತ್ತಿದೆ. ಜೊತೆಗೆ ಪ್ರಾಣಿಗಳ ಕಲರವ ಕೂಡ ಹೆಚ್ಚಾಗಿದೆ. ಇದರಿಂದ ಪ್ರವಾಸಿಗರೂ ಕೂಡ ಹೆಚ್ಚಾಗಿದ್ದಾರೆ.

ಇಲ್ಲಿಗೆ ವಾರ್ಷಿಕವಾಗಿ ಸರಿ ಸುಮಾರು 2 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಪ್ರಕೃತಿಯ ಸೊಬಗನ್ನು ಆಹ್ಲಾದಿಸಿ ಹೋಗುತ್ತಾರೆ. ಇದರಿಂದ ನಮ್ಮ ಇಲಾಖೆಗೂ ಕೂಡ ಹೆಚ್ಚಿನ ಲಾಭವಾಗಲಿದೆ. ಜೊತೆಗೆ ಇದರ ನಿವರ್ಾಹಣೆ ಕೂಡ ಚೆನ್ನಾಗಿ ಮಾಡಲು ಅವಕಾಶವಾಗುತ್ತೆ ಎಂದು ಬಂಡಿಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ನಿರ್ದೇಶಕರಾದ ಅಂಬಾಡಿ ಮಾಧವ್ ಹೇಳ್ತಾರೆ.

ಒಟ್ಟಾರೆಯಾಗಿ ದೇಶದ ಪ್ರತಿಷ್ಟಿತ ವನ್ಯಜೀವಿ ತಾಣವಾದ ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಡಲು ಈಗ ಒಳ್ಳೆ ಸೀಜನ್ ಎನ್ನಬಹುದು. ಇಲ್ಲಿಗೆ ಭೇಟಿ ನೀಡಬೇಕೆಂದು ಆಸಕ್ತಿ ಇರುವ ಪರಿಸರ ಪ್ರೇಮಿಗಳು ಪ್ರಾಣಿ ಪ್ರಿಯರು ಒಂದು ಬಾರಿ ಬಂದು ನೋಡಿದ್ರೆ ಒಂದು ಒಳ್ಳೆಯ ಅನುಭವ ನಿಮಗಾಗುತ್ತೆ.

ವರದಿ : ರಾಜೇಶ್ ಅಳಗಂಚಿ, TV5 ಚಾಮರಾಜನಗರ.

Next Story

RELATED STORIES