Top

ರಶೀದ್ ಮಾರಕ ದಾಳಿ: ಅಫ್ಘಾನ್‍ಗೆ ಮೊದಲ ಜಯ

ರಶೀದ್ ಮಾರಕ ದಾಳಿ: ಅಫ್ಘಾನ್‍ಗೆ ಮೊದಲ ಜಯ
X

[story-lines]ಡೆಹ್ರಾಡೂನ್: ಯುವ ಸ್ಪಿನ್ನರ್ ರಶೀದ್ ಖಾನ್ ಅವರ ಮಾರಕ ದಾಳಿಯ ನೆರವಿನಿಂದ ಅಫ್ಘಾನಿಸ್ಥಾನ್ ಬಾಂಗ್ಲಾದೇಶ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 45 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಅಫ್ಘಾನಿಸ್ತಾನ್ ಪರ ಅರಂಭಿಕ ಬ್ಯಾಟ್ಸಮನ್ ಮೊಹ್ಮದ್ ಶಾಜಾದ್ 40 ರನ್ ಗಳಿಸಿದ್ರು. ಬಾಂಗ್ಲಾ ಪರ ಅಬುಲ್ ಹಸನ್ 2 ವಿಕೆಟ್ ಪಡೆದ್ರು.168 ರನ್‍ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ರಶೀದ್ ಖಾನ್ ಶಾಕ್ ಕೊಟ್ರು. ಬಾಂಗ್ಲಾ ತಂಡ 19 ಓವರ್‍ಗಳಲ್ಲಿ 122 ರನ್‍ಗಳಿಗೆ ಅಲೌಟ್ ಆಯಿತು. 19 ವರ್ಷದ ರಶೀದ್ ಖಾನ್ ಮತ್ತು ಶಾಪೂರ್ ಜರ್ದಾನ್ ತಲಾ 3 ವಿಕೆಟ್ ಪಡೆದು ಮಿಂಚಿದ್ರು.

Next Story

RELATED STORIES