ವಿರಾಟ್ ಕೊಹ್ಲಿ ನನಗೆ ಸ್ಪೂರ್ತಿ: ಯಜುವೇಂದ್ರ ಚಾಹಲ್

X
TV5 Kannada3 Jun 2018 5:52 AM GMT
[story-lines]ನವದೆಹಲಿ:ವಿರಾಟ್ ಕೊಹ್ಲಿ ಬಗ್ಗೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮನಬಿಚ್ಚಿ ಮಾತನಾಡಿದ್ದಾರೆ. ವಿರಾಟ್ ಭಯ್ಯ (ಅಣ್ಣ) ನನಗೆ ಸ್ಫೂರ್ತಿಯಾಗಿದ್ದಾರೆ. ಆನ್ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ ನಲ್ಲಿ ನನಗೆ ತುಂಬ ಸಹಾಯ ಮಾಡ್ತಾರೆ. ಫಿಟ್ನೆಸ್ನಿಂದಾಗಿ ನನ್ನ ಜೀವನ ಬದಲಾಯಿತೆಂದು ಕೊಹ್ಲಿ ನನ್ನ ಬಳಿ ಯಾವಗಲೂ ಹೇಳುತ್ತಿರುತ್ತಾರೆ ಎಂದು ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹೇಳಿದ್ದಾರೆ.
ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಯುಜುವೇಂದ್ರ ಚಾಹಲ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ನನಗೆ ಪ್ರೇರಣೆಯಾಗಿದ್ದಾರೆ. ಅವರ ಫಿಟ್ನೆಸ್ ನನಗೂ ಫಿಟ್ ಆಗುವಂತೆ ಪ್ರೇರೇಪಿಸುತ್ತಿದೆ. ಫಿಟ್ನೆಸ್ ಎಷ್ಟು ಪ್ರಾಮುಖ್ಯತೆ ನೀಡಬೇಕೆಂಬುದನ್ನ ಅರಿತಿದ್ದೇನೆ. ಫಿಟ್ನೆಸ್ ಕಾಪಾಡಿಕೊಂಡ ನಂತರ ನನಗೆ ಆರಾಮಾಗಿದ್ದೀನಿ ಎಂದು ಅನಿಸುತ್ತಿದೆ ಎಂದು ಚಾಹಾಲ್ ಹೇಳಿದ್ದಾರೆ.
Next Story