Top

ಟೆಸ್ಟ್ ಚಾಂಪಿಯನ್‍ಶಿಪ್ ನಿಯಮ: ಟೀಂ ಇಂಡಿಯಾ ನಂ.1 ಅಲ್ಲ..!

ಟೆಸ್ಟ್ ಚಾಂಪಿಯನ್‍ಶಿಪ್ ನಿಯಮ: ಟೀಂ ಇಂಡಿಯಾ ನಂ.1 ಅಲ್ಲ..!
X

[story-lines]ದುಬೈ:ಮುಂದಿನ ವರ್ಷದಿಂದ ಟೆಸ್ಟ್ ಚಾಂಪಿಯನ್‍ಶಿಪ್ ಅಡಿಯಲ್ಲಿ ಹೊಸ ಅಂಕಪಟ್ಟಿಯನ್ನ ಐಸಿಸಿ ಜಾರಿಗೊಳಿಸಿದರೆ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಕುಸಿಯಲಿದೆ.

ಈ ಹೊಸ ನೀತಿ ನಿಯಮದಲ್ಲಿ ಪ್ರತಿ ತಂಡಕ್ಕೂ ಲಾಭ ನಷ್ಟ ಎರಡೂ ಇದೆ. ಈ ಹೊಸ ನಿಯಮದಲ್ಲಿ ಎರಡು ವರ್ಷಕೊಮ್ಮೆ ಟೆಸ್ಟ್ ಚಾಂಪಿಯನ್ ಯಾರೆಂದು ಘೋಷಿಲಾಗುತ್ತದೆ. ಹೀಗಿರುವ ನಿಯಮದಲ್ಲಿ ಪ್ರತಿ ಸರಣಿ ನಂತರ ತಂಡಗಳ ಸ್ಥಾನಗಳನ್ನ ಹೇಳಲಾಗುತ್ತಿತ್ತು. ಹೊಸ ನಿಯಮದಲ್ಲಿ ಪ್ರತಿ ಪಂದ್ಯದ ಫಲಿತಾಂಶ ದಾಖಲಾಗುತ್ತದೆ. ಮೊನ್ನೆ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಬೈನಲ್ಲಿ ನಡೆದ ಐಸಿಸಿ ಸಮಿತಿ ಸಭೆಯಲ್ಲಿ, ಪ್ರತಿ ಪಂದ್ಯಕ್ಕೆ ಅಂಕಗಳನ್ನ ನೀಡಬೇಕು. ಸರಣಿ ಗೆಲುವಿಗೆ ಅಂಕ ನೀಡಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.

ಒಂದು ವೇಳೆ ಕಳೆದ ಎರಡು ವರ್ಷದ ಫಲಿತಾಂಶಕ್ಕೆ ಈಗ ಹೊಸ ನಿಯಮವನ್ನ ಅಳವಡಿಸಿದರೆ ಟೀಂ ಇಂಡಿಯಾ ನಂ.1 ಸ್ಥಾನವನ್ನ ಕಳೆದುಕೊಂಡು 497.2 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಲಿದೆ. 555.5 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆಯಲಿದೆ.

Next Story

RELATED STORIES