Top

ನಮ್ಮ ಅಟವನ್ನ ನೋಡಲು ಮರೆಯದಿರಿ:ಸುನಿಲ್ ಚೆಟ್ರಿ

ನಮ್ಮ ಅಟವನ್ನ ನೋಡಲು ಮರೆಯದಿರಿ:ಸುನಿಲ್ ಚೆಟ್ರಿ
X

[story-lines]ಮುಂಬೈ: ನಮ್ಮನ್ನು ಎಷ್ಟು ಬೇಕಾದ್ರು ಟೀಕಿಸಿ, ನಿಂದನೆ ಮಾಡಿ ಆದ್ರೆ ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟವನ್ನ ಮಾತ್ರ ಬಂದು ವೀಕ್ಷಿಸಿ ಎಂದು ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಹೇಳಿದ್ದಾರೆ. ಮೊನ್ನೆ ಪಂದ್ಯವನ್ನ ನೋಡಲು ಕೇವಲ 2,569 ಅಭಿಮಾನಿಗಳು ಸ್ಟೇಡಿಯಂಗೆ ಬಂದಿದ್ರು ಅಲ್ಲಿನ ಅಧಿಕಾರಿಗಳು ತಿಳಿಸಿದ್ರು. ಇದು ಭಾರೀ ಸುದ್ದಿಯಾಗಿತ್ತು.

ಇದಕ್ಕೆ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ ಸುನೀಲ್, ನಮ್ಮ ಎಷ್ಟು ಬೇಕಾದ್ರೂ ಟೀಕಿಸಿ ಆದ್ರೆ ನಮ್ಮ ಆಟವನ್ನ ನೋಡಲು ಬನ್ನಿ ಎಂದು ಮನವಿ ಮಾಡಿಕೊಂಡಿದ್ರು.

ಇದಕ್ಕೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಪ್ರತಿಕ್ರಿಯೆ ನೀಡಿದ್ದಾರೆ.ಯಾರೆಲ್ಲ ಯೂರೋಪ್ ಕ್ಲಬ್‍ಗಳ ದೊಡ್ಡ ಅಭಿಮಾನ ಹೊಂದಿದ್ದೀರೊ ಅವರಿಗೆ ಹೇಳೊದೇನೆಂದರೆ ಆಟದ ಗುಣಮಟ್ಟ ಒಂದೇ ರೀತಿ ಇರೋದಿಲ್ಲ. ನಮ್ಮ ಆಟ ಅವರಂತಿಲ್ಲ ಅನ್ನೋದನ್ನ ಒಪ್ಪಿಕೊಳ್ಳುತ್ತೇವೆ. ಆದ್ರೆ ನಮ್ಮ ಆಸೆ ಮತ್ತು ಬದ್ಧತೆ ಇದೆ. ನೀವು ಮೈದಾನದಲ್ಲಿ ಬಂದು ನಮ್ಮ ಪಂದ್ಯವನ್ನ ವೀಕ್ಷಿಸಿ ನಿಮ್ಮ ಸಮಯಕ್ಕೆ ಬೆಲೆ ಕಟ್ಟುತ್ತೇವೆ ಎಂದು ಚೆಟ್ರಿ ಹೇಳಿದ್ದಾರೆ.

Next Story

RELATED STORIES