Top

ಕನ್ನಡ ಚಿತ್ರಂಗದಲ್ಲಿ ಸಂಚಲನ ಮೂಡಿಸಲು ಬರ್ತಿವೆ ಬಹುನಿರೀಕ್ಷಿತ ಚಿತ್ರಗಳು!

ಕನ್ನಡ ಚಿತ್ರಂಗದಲ್ಲಿ ಸಂಚಲನ ಮೂಡಿಸಲು ಬರ್ತಿವೆ ಬಹುನಿರೀಕ್ಷಿತ ಚಿತ್ರಗಳು!
X

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಐಪಿಎಲ್ ಮತ್ತು ಎಲೆಕ್ಷನ್ ಗುಂಗಿನಿಂದ ಜನರು ಹೊರಗೆ ಬರುತ್ತಿದ್ದಂತೆ ಕನ್ನಡ ಚಿತ್ರರಂಗ ಕೂಡ ಮೈಕೊಡವಿಕೊಂಡಿದೆ. ಬಹು ಬಜೆಟ್​ನ ಚಿತ್ರಗಳು ಈಗ ಬಿಡುಗಡೆಗೆ ಸರದಿ ಸಾಲಿನಲ್ಲಿ ನಿಂತಿದ್ದು, ಒಂದರ ಹಿಂದೆ ಒಂದಂತೆ ಬಿಡುಗಡೆಗೆ ಸಜ್ಜಾಗಿವೆ.

ಸ್ಮಾಲ್ ಬಜೆಟ್​ನ ಸಣ್ಣ ಪುಟ್ಟ ಸಿನಿಮಾಗಳು ಪ್ರತೀ ವಾರ ರಿಲೀಸ್ ಆಗ್ತಿದ್ದರೂ ಸಹ ಬಿಗ್ ಬಜೆಟ್ ಸಿನಿಮಾಗಳು ಅನಿಸಿಕೊಂಡ ಬಹುತೇಕ ಬಿಗ್ ಸ್ಟಾರ್ಸ್​ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಬರೋಬ್ಬರಿ ಎರಡು ತಿಂಗಳ ಕಾಲ ಇಡೀ ಗಾಂಧಿನಗರ ತಟಸ್ಥವಾಗಿದ್ದುಬಿಟ್ಟಿತ್ತು. ಅದ್ರಲ್ಲೂ ರಿಲೀಸ್ ಆದ ಸಿನಿಮಾಗಳಿಗೆ ನಿರೀಕ್ಷಿಸದ ಸಕ್ಸಸ್ ಸಿಗಲೇ ಇಲ್ಲ. ಇದೀಗ ಒಂದೊಂದಾಗಿ ಬಿಡುಗಡೆಗೆ ಸಜ್ಜಾಗ್ತಿವೆ ಈ ವರ್ಷದ ಬಹು ನಿರೀಕ್ಷಿತ, ಬಹು ತಾರಾಗಣದ, ಬಹು ಕೋಟಿ ಬಜೆಟ್​ನ ಚಿತ್ರಗಳು.

ರಾಕಿಂಗ್ ಸ್ಟಾರ್ ಯಶ್​ರ ಕೆಜಿಎಫ್, ಜೋಗಿ ಪ್ರೇಮ್- ಸುದೀಪ್- ಶಿವಣ್ಣ ಕಾಂಬೋನ ದಿ ವಿಲನ್, ಚಾಲೆಂಜಿಂಗ್ ಸ್ಟಾರ್ ದರ್ಶನ್​ರ ಕುರುಕ್ಷೇತ್ರ, ರೆಬೆಲ್ ಸ್ಟಾರ್ ಅಂಬರೀಶ್​ರ ಅಂಬಿ ನಿಂಗ್ ವಯಸ್ಸಾಯ್ತೋ... ಹೀಗೆ ಸಾಲು ಸಾಲು ಸಿನಿಮಾಗಳು ರಿಲೀಸ್ ಕ್ಯೂನಲ್ಲಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಈ ವರ್ಷದ ಭಾರೀ ನಿರೀಕ್ಷೆ ಹುಟ್ಟಿಸಿದ ಚಿತ್ರ. ಪೌರಾಣಿಕ ಮಹಾದೃಶ್ಯಕಾವ್ಯ ಕುರುಕ್ಷೇತ್ರಕ್ಕಾಗಿ ಇಡೀ ಕನ್ನಡ ಚಿತ್ರರಂಗ ಕಾಯ್ತಿದೆ. ಚಿತ್ರರಂಗದ ಇಡೀ ಕಲಾವಿದ ಬಳಗವೇ ಕೂಡಿ ಮಾಡಿರೋ ಸಿನಿಮಾ ಇದಾಗಿದ್ದರಿಂದ ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ ಕುರುಕ್ಷೇತ್ರ. ಅಂದಹಾಗೆ ಈ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗೋ ಎಲ್ಲಾ ಲಕ್ಷಣಗಳು ಎದ್ದು ಕಾಣ್ತಿವೆ.

ಎಲೆಕ್ಷನ್ ಟೆನ್ಷನ್​ನಲ್ಲಿದ್ದ ನಿರ್ಮಾಪಕ ಮುನಿರತ್ನ, ಆರ್ ಆರ್ ನಗರದ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದಂತಹ ಲೀಡ್​ನಲ್ಲಿ ಗೆದ್ದಾಗಿದ್ದಾರೆ. ಹಾಗಾಗಿ ಇದೀಗ ಕುರುಕ್ಷೇತ್ರ ಮೇಲೆ ಫೋಕಸ್ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ಎರಡು ತಿಂಗಳಿಂದ ನಿರಂತರವಾಗಿ ಪೋಸ್ಟ್ ಪ್ರೊಡಕ್ಷನ್​ನಲ್ಲಿದ್ದ ಕುರುಕ್ಷೇತ್ರ ಸಿನಿಮಾ, ಈಗಾಗ್ಲೇ 2ಡಿ ಕಾಪಿ ರೆಡಿಯಾಗಿದೆ. sದ್ಯ ತ್ರೀಡಿ ಕಾಪಿಗಾಗಿ ಕಾಯ್ತಿರೋ ಚಿತ್ರತಂಡ ಇದೇ ತಿಂಗಳಾಂತ್ಯಕ್ಕೆ ಸಿದ್ದವಾಗಲಿದೆ ಅನ್ನೋ ಮಾಹಿತಿ ಬಿಟ್ಟುಕೊಟ್ಟಿದೆ.

ಕುರುಕ್ಷೇತ್ರ ಸಿನಿಮಾ ತ್ರಿಡಿಯಲ್ಲಿ ತಯಾರಾಗಲಿದೆ ಅನ್ನೋದು ಇಡೀ ಚಿತ್ರರಂಗಕ್ಕೇ ಗೊತ್ತಿರೋ ವಿಷ್ಯ. ಹಾಗಾಗಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಕೊಂಚ ವಿಳಂಬವಾಗಿದ್ದು, ಡಬ್ಬಿಂಗ್ ಮತ್ತು ರೀ ರೆಕಾರ್ಡಿಂಗ್ ಕಾರ್ಯಗಳು ಈಗಾಗ್ಲೇ ಮುಗಿದಿದೆ. ಗ್ರಾಫಿಕ್ಸ್​ಗೆ ಫೈನಲ್ ಟಚ್ ಕೊಡ್ತಿರೋ ಗ್ರಾಫಿಕಲ್ ಟೀಂ, ಇದೇ ತಿಂಗಳಾಂತ್ಯಕ್ಕೆ ಸಿನಿಮಾನ ನಿರ್ಮಾಪಕರ ಕೈಗಿಡಲಿದೆ. ಎಲ್ಲಾ ಅಂದುಕೊಂಡಂತಾದ್ರೆ ಸಿನಿಮಾದ ಆಡಿಯೋ ಲಾಂಚ್ ಇದೇ ತಿಂಗಳಾಂತ್ಯಕ್ಕೆ ಮಾಡಲಿರೋ ಕುರುಕ್ಷೇತ್ರ ಟೀಂ, ಸಿನಿಮಾನ ಮುಂದಿನ ತಿಂಗಳು ವರ್ಲ್ಡ್​ವೈಡ್ ಬಿಗ್ ಸ್ಕ್ರೀನ್​ಗೆ ತರಲಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಮೇಲೆ ವಿಲನ್ ಅಬ್ಬರ..!!

ಈ ವರ್ಷದ ಭಾರೀ ನಿರೀಕ್ಷೆ ಹುಟ್ಟಿಸಿದ ಚಿತ್ರಗಳಲ್ಲಿ ದಿ ವಿಲನ್ ಮತ್ತು ಕೆಜಿಎಫ್​ ಕೂಡ ಒಂದು. ಈ ಎರಡೂ ಸಿನಿಮಾಗಳು ಈಗಾಗಲೇ ತೆರೆಗೆ ಬರ್ಬೇಕಿತ್ತು.. ಸದ್ಯ ಡಬ್ಬಿಂಗ್ ಹಂತದಲ್ಲಿರೋ ದಿ ವಿಲನ್, ಕೆಜಿಎಫ್​ ಶೀಘ್ರದಲ್ಲೇ ತೆರೆಗೆ ಬರೋ ಸೂಚನೆ ಸಿಕ್ಕಿದೆ..

ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಇಷ್ಟೋತ್ತಿಗೆ ದಿ ವಿಲನ್ ಸಿನಿಮಾ ತೆರೆಗೆ ಬರಬೇಕಿತ್ತು.. ಕಾರಣಾಂತರಗಳಿಂದ ಚಿತ್ರದ ಶೂಟಿಂಗ್ ತಡವಾಗಿದ್ದು, .. ಇತ್ತೀಚೆಗಷ್ಟೆ ಶೂಟಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ ಡಬ್ಬಿಂಗ್​ಗೆ ಚಾಲನೆ ಕೊಟ್ಟಿದೆ..ದಿ ವಿಲನ್ ಚಿತ್ರ ಏಕಕಾಲಕ್ಕೆ 6 ಭಾಷೆಗಳಲ್ಲಿ ನಿರ್ಮಾಣವಾಗ್ತಿದ್ದು, ಇದು ಬಾಲಿವುಡ್​ ಲೆವೆಲ್​ನಲ್ಲಿ ನಿರ್ಮಾಣವಾಗ್ತಿರೋ ಕನ್ನಡ ಸಿನಿಮಾ ಅನ್ಬೋದು..

ದಿ ವಿಲನ್ ಚಿತ್ರದಲ್ಲಿ ಸಿಜಿ ವರ್ಕ್ ಜಾಸ್ತಿಯಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸ ತಡವಾಗ್ತಿದೆ.. ಸದ್ಯ ಈವರೆಗೆ ಚಿತ್ರದ ಟೀಸರ್ ಸಹ ಬಿಡುಗಡೆ ಆಗದೇ ಇರೋದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಸದ್ಯ ಡಬ್ಬಿಂಗ್ ಕೆಲಸ ಪ್ರಗತಿಯಲ್ಲಿದ್ದು, ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ದಿ ವಿಲನ್ ದರ್ಬಾರ್ ಶುರುವಾಗೋ ಸಾಧ್ಯತೆಯಿದೆ.

ಪಂಚಭಾಷೆಯಲ್ಲಿ ಕೆಜಿಎಫ್​

ಮೇಕಿಂಗ್ ವಿಷ್ಯುವಲ್ಸ್ ಜೊತೆಗೆ ಕಂಪ್ಲೀಟ್ ಆಗಿ ಯಶ್​​ ಲುಕ್ ರಿವೀಲ್ ಮಾಡದೇ ರಿಲೀಸ್ ಮಾಡಿರುವ ಕೆಜಿಎಫ್​​ ಟೀಸರ್​​​​​​​ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ..ಚಿತ್ರವನ್ನ ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತೆರೆಗೆ ತರಲಾಗ್ತಿದೆ..

ಮಾಮೂಲಿ ಸಿನಿಮಾಗೂ ಕೆಜಿಎಫ್ ಸಿನಿಮಾ ಮೇಕಿಂಗ್​ಗೂ ಬಹಳ ವ್ಯತ್ಯಾಸವಿದೆ.. ಕೆಜಿಎಫ್​ನ ಗತಕಾಲವನ್ನ ತೆರೆಮೇಲೆ ತರಲು ಪ್ರಶಾಂತ್ ನೀಲ್ ಅಂಡ್ ಟೀಂ ಸಿಕ್ಕಾಪಟ್ಟೆ ಕಸರತ್ತು ನಡೆಸಿದೆ.. ಆತುರ ಪಡೋಕ್ಕಿಂತ ಪ್ರೇಕ್ಷಕರ ಕಾತುರವನ್ನ ತಣಿಸೋದು ಮುಖ್ಯ ಅಂದುಕೊಂಡಿರೋ ನಿರ್ಮಾಪಕರು ಲೇಟ್​​​​ ಆದ್ರೂ, ಟೇಸ್ಟ್​​​​ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಚಿತ್ರವನ್ನ ತೆರೆಗೆ ತರ್ತಿದ್ದಾರೆ..

ರಿಲೀಸ್​ಗೆ ರೆಡಿ ಅಂಬಿ ನಿಂಗ್ ವಯಸ್ಸಾಯ್ತೋ..!

ಅಂಬಿ ನಿಂಗ್ ವಯಸ್ಸಾಯ್ತೋ.. ರೆಬೆಲ್ ಸ್ಟಾರ್ ಅಂಬರೀಶ್ ಮತ್ತೆ ಫುಲ್ ಫ್ಲೆಡ್ಜ್ ಹೀರೋ ಆಗಿ ನಟಿಸಿರುವ ಸಿನಿಮಾ. ಜಾಕ್ ಮಂಜು ಮತ್ತು ಕಿಚ್ಚ ಸುದೀಪ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ ರಿಲೀಸ್ ಡೇಟ್ ಸದ್ಯದಲ್ಲೇ ಬಹಿರಂಗ ಮಾಡಲಿದೆ ಚಿತ್ರತಂಡ.

ಕೋಟಿಗೊಬ್ಬ-3, ಪೈಲ್ವಾನ್

ದಿ ವಿಲನ್ ಸಿನಿಮಾದ ಹೊರತಾಗಿ ಕಿಚ್ಚ ಸುದೀಪ್​ರ ಮತ್ತೆರಡು ಸಿನಿಮಾಗಳು ಈ ವರ್ಷ ರಿಲೀಸ್ ಆಗಲಿವೆ. ಕೋಟಿಗೊಬ್ಬ ಸೀರೀಸ್​ನ ಮತ್ತೊಂದು ಸಿನಿಮಾ ಕೋಟಿಗೊಬ್ಬ-3 ಮತ್ತು ದೇಸಿಕ್ರೀಡೆ ಕುಸ್ತಿ-ರೆಸ್ಲಿಂಗ್ ಕಥಾನಕದ ಪೈಲ್ವಾನ್ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಈಗಾಗ್ಲೇ ಇವೆರಡೂ ಸಿನಿಮಾಗಳ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಇದೇ ವರ್ಷಾಂತ್ಯಕ್ಕೆ ಎರಡೂ ಸಿನಿಮಾ ತೆರೆಗೆ ಬರಲಿವೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್​ರ ಯಜಮಾನ ಸಿನಿಮಾ ಕೂಡ ನಾನ್​ಸ್ಟಾಪ್ ಶೂಟಿಂಗ್ ನಡೆಸ್ತಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ನಡೆಸ್ತಿರೋ ಚಿತ್ರತಂಡ ಬಹುತೇಕ ಟಾಕೀ ಪೋರ್ಷನ್ ಕಂಪ್ಲೀಟ್ ಮಾಡಿದೆ. ಸ್ವಲ್ಪ ಹೆಚ್ಚೂ ಕಡಿಮೆ ಇದೇ ವರ್ಷದಲ್ಲಿ ಯಜಮಾನನ ಖದರ್ ತೆರೆಮೇಲೆ ನೋಡಬಹುದು ಅನ್ನೋ ಸೂಚನೆ ಕೊಟ್ಟಿದೆ ಟೀಂ ಯಜಮಾನ.

ಪತ್ರಕರ್ತ ನಟಸಾರ್ವಭೌಮನ ಖದರ್

ಹೌದು... ನಟಸಾರ್ವಭೌಮ, ಈ ವರ್ಷದ ಮತ್ತೊಂದು ನಿರೀಕ್ಷಿತ ಸಿನಿಮಾ. ಪುನೀತ್​ ರಾಜ್​ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಕೂಡ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್​ಗಳ ಮೂಲಕ ಶೂಟಿಂಗ್ ನಡೆಸ್ತಿದೆ. ಸದ್ಯ ಬಳ್ಳಾರಿಯ ಜಿಂದಾಲ್​ನಲ್ಲಿ ಬೀಡುಬಿಟ್ಟಿರೋ ಟೀಂ ನಟಸಾರ್ವಭೌಮ, ಆದಷ್ಟು ಬೇಗ ತೆರೆಗೆ ತರೋ ಯೋಜನೆಯಲ್ಲಿದೆ. ಅಪ್ಪು ಇದೇ ಮೊದಲ ಬಾರಿ ಜರ್ನಲಿಸ್ಟ್ ರೋಲ್ ಮಾಡ್ತಿದ್ದು, ರಣವಿಕ್ರಮ ನಂತ್ರ ಪವನ್ ಒಡೆಯರ್- ಪುನೀತ್ ಎರಡನೇ ಕಾಂಬೋ ಇದಾಗಿದೆ.

ಅಖಾಡಕ್ಕೆ ತಯಾರಾಗ್ತಿವೆ ಉಪ್ಪಿಯ 2 ಸಿನಿಮಾ

ಪ್ರಜಾಕೀಯದ ಜೊತೆ ಜೊತೆಗೇನೇ ಉಪೆಂದ್ರರ ಎರಡು ಸಿನಿಮಾಗಳು ರಿಲೀಸ್​ಗೆ ಸಜ್ಜಾಗ್ತಿವೆ. ಅದ್ರಲ್ಲಿ ಹೋಮ್ ಮಿನಿಸ್ಟರ್ ಸಿನಿಮಾ ಸೆನ್ಸಾರ್ ಅಂಗಳಕ್ಕೆ ತಯಾರಾಗಿದ್ರೆ, ಐ ಲವ್ ಯು ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಒಟ್ಟಾರೆ ಉಪ್ಪಿಯ ಇವೆರಡೂ ಸಿನಿಮಾಗಳು ಇದೇ ವರ್ಷ ತೆರೆಗೆ ಬರಲಿವೆ.

ಇನ್ನು ಉದಯೋನ್ಮುಖ ಸ್ಟಾರ್​ಗಳಾಗಿ ಶೈನ್ ಆಗ್ತಿರೋ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​ರ ಸೀತಾರಾಮ ಕಲ್ಯಾಣ ಮತ್ತು ಅಭಿಷೇಕ್ ಅಂಬರೀಶ್​ರ ಅಮರ್ ಸಿನಿಮಾಗಳ ರಿಲೀಸ್​ಗೆ ಡೆಡ್​ಲೈನ್ ಫಿಕ್ಸ್ ಆಗಿದೆ. ಇದೇ ವರ್ಷದಲ್ಲೇ ಇವೆರಡೂ ಸಿನಿಮಾಗಳು ರಿಲೀಸ್ ಆಗಲಿದ್ದು, ವರ್ಷಪೂರ ಸಿನಿಮೋತ್ಸವ ನಡೆಯಲಿದೆ.

Next Story

RELATED STORIES