Top

7 ಜನರನ್ನು ಸಜೀವ ದಹನ ಮಾಡಿದವನನ್ನು ಕ್ಷಮಿಸದ ರಾಷ್ಟ್ರಪತಿ ಕೋವಿಂದ್​

7 ಜನರನ್ನು ಸಜೀವ ದಹನ ಮಾಡಿದವನನ್ನು ಕ್ಷಮಿಸದ ರಾಷ್ಟ್ರಪತಿ ಕೋವಿಂದ್​
X

ಎಮ್ಮೆ ಕಳವು ಪ್ರಕರಣ ಸಂಬಂಧ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿಯನ್ನು ಜೀವಂತ ದಹನ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ವ್ಯಕ್ತಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಮಾನಾಥ ಕೋವಿಂದ್ ತಿರಸ್ಕರಿಸಿದ್ದಾರೆ. ಇದು ರಾಷ್ಟ್ರಪತಿ ಆದ ನಂತರ ಕೋವಿಂದ್ ಅವರಿಗೆ ಬಂದ ಮೊದಲ ಕ್ಷಮಾದಾನದ ಅರ್ಜಿಯಾಗಿತ್ತು.

2006ರಲ್ಲಿ ಬಿಹಾರದ ವೈಶಾಲಿ ಜಿಲ್ಲೆಯ ರಾಘೋವ್‍ಪುರ್ ತಾಲ್ಲೂಕಿನ ವಿಜಯೇಂದ್ರ ಮಹತೊ ಮತ್ತು ಅವರ ಕುಟುಂಬದ ಆರು ಮಂದಿಯನ್ನು ಜಗತ್‍ರೈ ಎಂಬಾತ ಸಜೀವ ದಹನ ಮಾಡಿದ್ದ. ಕೇವಲ ಎಮ್ಮೆಯೊಂದನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಪಿತನಾಗಿದ್ದ ರೈ ಈ ದುಷ್ಕøತ್ಯ ಎಸಗಿದ್ದ. ಈ ಘೋರ ಕೃತ್ಯಕ್ಕೆ ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Next Story

RELATED STORIES