Top

ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
X

ಕೆ.ಆರ್.ಪುರ: ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ರಾಮಮೂರ್ತಿನಗರದ ಮಂಜುನಾಥ ಬಡಾವಣೆಯಲ್ಲಿ ಜರುಗಿದೆ.

ನಾಗೇಶ್ ಹಾಗೂ ಮುಗಳಬೆಲೆ ಗ್ರಾಮದ ಭಾರತಿ‌ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಆಡುಗೊಡಿಯ ಬಾಷ್ ಕಂಪನಿಯಲ್ಲಿ‌ ಟೆಕ್ನೀಷಿಯನ್ ಕೆಲಸ ಮಾಡುತ್ತಿದ್ದ‌ ನಾಗೇಶ್​ಗೆ ಬೇರೊಂದು ಮದುವೆಯಾಗಿ ಒಂದು ಗಂಡು ಮಗು ಇದ್ದರೂ ಭಾರತಿ ಜೊತೆ ಪ್ರೇಮ ಮುಂದುವರಿಸಿದ್ದ. ಮೊದಲನೆ ಮದುವೆಗೂ ಮುನ್ನವೇ ಭಾರತಿಯೊಂದಿಗೆ ಪ್ರೀತಿ ಸಂಬಂಧ ಹೊಂದಿದ್ದ ನಾಗೇಶ್ ಪೋಷಕರ ಒತ್ತಡಕ್ಕೆ ಮದುವೆಯಾಗಿದ್ದ.

ಭಾರತಿಯೊಂದಿಗಿನ ಸಂಬಂಧ ಮುರಿದುಕೊಳ್ಳುವಂತೆ ಮಾವನಿಂದ ಕಿರುಕುಳ ಕುರಿತು ಡೆತ್​ನೋಟ್​ನಲ್ಲಿ ಉಲ್ಲೇಖಿಸಿರುವ ನಾಗೇಶ್​, ಭಾರತಿಯನ್ನು ಬಿಟ್ಟು ಬದುಕಲಾರೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೂವರು ಸ್ನೇಹಿತರಿಗೆ ಪತ್ರ ಬರೆದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES