Top

ಸ್ವದೇಶಿ ನಿರ್ಮಿತ ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ

ಸ್ವದೇಶಿ ನಿರ್ಮಿತ ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ
X

ನವದೆಹಲಿ: ಸ್ವದೇಶಿ ನಿರ್ಮಿತ 5000 ಕಿ.ಮೀ. ದೂರ ಚಿಮ್ಮಬಲ್ಲ ಪರಮಾಣು ಹೊತ್ತೊಯ್ಯಬಲ್ಲ ದೂರಗಾಮಿ ಖಂಡಾಂತರ ಕ್ಷಿಪಣಿ ಅಗ್ನಿ-5 ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ.

[story-lines]

ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಭಾನುವಾರ ಬೆಳಗ್ಗೆ ಭೂಮಿಯಿಂದ ಭೂಮಿಗೆ ಚಿಮ್ಮಬಲ್ಲ ಅಗ್ನಿ-5 ಯಶಸ್ವಿ ಪ್ರಯೋಗ ನಡೆಸಲಾಯಿತು. 6ನೇ ಬಾರಿ ನಡೆಸಲಾದ ಪರೀಕ್ಷೆ ಯಶಸ್ವಿಯಾಗುವುದರೊಂದಿಗೆ ಭಾರತದ ರಕ್ಷಣಾ ಸಾಮರ್ಥ್ಯ ಬಲವರ್ಧನೆಗೊಂಡಂತಾಗಿದೆ.

ಬಂಗಾಳಕೊಲ್ಲಿಯ ಪರೀಕ್ಷಾ ಕೇಂದ್ರದಿಂದ ಪ್ರಯೋಗಾರ್ಥ ಹಾರಾಟ ನಡೆಸಲಾಯಿತು. ನೇವಿಗೇಷನ್​, ಮಾರ್ಗದರ್ಶಿ, ಸಿಡಿತಲೆ ಮತ್ತು ಇಂಜಿನ್​ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಗ್ನಿ-5 ಕ್ಷಿಪಣೆ ಪ್ರಯೋಗ ನಡೆಸಲಾಯಿತು.

Next Story

RELATED STORIES