Top

ಪತ್ನಿ ದೂರಾದಳೆಂದು ಪತಿ ಮಾಡಿದ್ದೇನು ಗೊತ್ತಾ..?

ಪತ್ನಿ ದೂರಾದಳೆಂದು ಪತಿ ಮಾಡಿದ್ದೇನು ಗೊತ್ತಾ..?
X

[story-lines]ಬೆಂಗಳೂರು:ಕಿರಾತಕ ಪತಿಯೋರ್ವ ಡೇಟಿಂಗ್ ವೆಬ್ ಸೈಟ್ ನಲ್ಲಿ ತನ್ನ ಪತ್ನಿಯ ಮೊಬೈಲ್ ನಂಬರ್ ಹಾಕಿ, ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ವಿನಯ್ ಎಂಬಾತ ತನ್ನ ಪತ್ನಿಯ ಜೊತೆ ಜಗಳವಾಡಿಕೊಂಡು, ಹಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇದೇ ವೇಳೆ ಫೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ, ಬಳಿಕ ತನ್ನ ಪತ್ನಿಯ ಫೋಟೋ ಜೊತೆಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್ ಮಾಡಿ ಹಾಕಿದ್ದ. ಇದಾದ ಬಳಿಕ, ತನ್ನ ಪತ್ನಿಯ ಮೊಬೈಲ್ ನಂಬರ್ ನ್ನು ಲೋಕ್ಯಾಂಟೋ ವೆಬ್ ಸೈಟ್ ನಲ್ಲಿ ಹಾಕಿದ್ದ. ಇದರಿಂದಾಗಿ ಅಪರಿಚಿತರು ಪತ್ನಿಗೆ ನಿರಂತರವಾಗಿ ಕಾಲ್ ಮಾಡಿ, ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಅಂತಿಮವಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ವಿನಯ್ ನನ್ನು ಬಂಧಿಸಿದ್ದಾರೆ.

Next Story

RELATED STORIES