Top

14 ನಿಮಿಷ ನಾಪತ್ತೆಯಾಗಿದ್ದ ಸುಷ್ಮಾ ಸ್ವರಾಜ್ ಇದ್ದ ವಿಮಾನ

14 ನಿಮಿಷ ನಾಪತ್ತೆಯಾಗಿದ್ದ ಸುಷ್ಮಾ ಸ್ವರಾಜ್ ಇದ್ದ ವಿಮಾನ
X

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷಗಳ ಕಾಲ ರಾಡರ್​ ಸಂಪರ್ಕ ಕಡಿತಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸುಷ್ಮಾ ಸ್ವರಾಜ್ ತಿರುವನಂತಪುರದಿಂದ ಶನಿವಾರ ಮಧ್ಯಾಹ್ನ 2.08 ನಿಮಿಷಕ್ಕೆ ಹೊರಟಿತ್ತು. ಮಾರಿಷಸ್ ದ್ವೀಪದ ಸಾಗುತ್ತಿದ್ದಾಗ ಅಂದರೆ ಸಮಯ ಸಂಜೆ 4.44ರಿಂದ 4.58ರವರೆಗೆ ಏರ್ ಟ್ರಾಫಿಕ್ ಸಂಪರ್ಕ ಕಡಿದುಕೊಂಡಿತ್ತು.

ಇಂಡಿಯನ್ ಏರ್ ಫೋರ್ಸ್ ವಿಮಾನ ಐಎಫ್​ಸಿ 31 ಭಾರತೀಯ ಸಂಪರ್ಕ ಕಡಿತಗೊಂಡ ನಂತರ ಮಾರಿಷಸ್ ವಿಮಾನ ಟ್ರಾಫಿಕ್ ಸಂಪರ್ಕಕ್ಕೆ ಸಿಗಬೇಕಿತ್ತು. ಆದರೆ ಕೆಲ ನಿಮಿಷಗಳ ಕಾಲ ಸಂಪರ್ಕಕ್ಕೆ ಸಿಗದ ಕಾರಣ ಆತಂಕ ಸೃಷ್ಟಿಯಾಗಿತ್ತು.

ಆದರೆ ಕೆಲ ನಿಮಿಷಗಳಲ್ಲಿಯೇ ಸಂಪರ್ಕಕ್ಕೆ ಸಿಕ್ಕಿದ್ದರಿಂದ ನಂತರ ಮಾರಿಷಸ್ ಪ್ರಧಾನಿಯನ್ನು ಸುಷ್ಮಾ ಸ್ವರಾಜ್ ಭೇಟಿ ಮಾಡಿ ಮಾತುಕತೆ ನಡೆಸಿದರು.

Next Story

RELATED STORIES