Top

ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರ ಗುರುತುಚೀಟಿ: ತನಿಖೆಗೆ ಆದೇಶ

ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರ ಗುರುತುಚೀಟಿ: ತನಿಖೆಗೆ ಆದೇಶ
X

ಮಧ್ಯಪ್ರದೇಶದಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 60 ಲಕ್ಷಕ್ಕೂ ಅಧಿಕ ನಕಲಿ ಮತದಾರರ ಚೀಟಿ ಸೃಷ್ಟಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪ ಬೆನ್ನಲ್ಲೇ ನೂರಾರು ನಕಲಿ ವೋಟರ್ ಐಟಿ ಪತ್ತೆಯಾಗಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯ ಚುನವಣಾಧಿಕಾರಿ ತನಿಖೆಗೆ ಆದೇಶಿಸಿದ್ದು, ನಾಲ್ಕು ತಂಡಗಳನ್ನು ರಚಿಸಿದ್ದಾರೆ.

ರಾಜ್ಯದಲ್ಲಿ 60 ಲಕ್ಷ ನಕಲಿ ಮತದಾರರ ಚೀಟಿ ಮಾಡಲಾಗಿದೆ ಎಂದು ಕಾಂಗ್ರೆಸ್ ಚುನಾವಣಾಧಿಕಾರಿಗೆ ದೂರು ನೀಡಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾಧಿಕಾರಿ ಮನೆಮನೆಗೆ ಭೇಟಿ ನೀಡಿ ಮತದಾರರ ಚೀಟಿ ಕುರಿತು ತನಿಖೆ ನಡೆಸಲು ಮುಂದಾಗಿದೆ. ನಾಲ್ಕು ದಿನದಲ್ಲಿ ವರದಿ ನೀಡಬೇಕು ಹಾಗೂ ತಪ್ಪು ಕಂಡುಬಂದಲ್ಲಿ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜ್ಯೋತಿರಾಧಿತ್ಯ ಸಿಂಧ್ಯಾ ಪತ್ರಿಕಾಗೋಷ್ಠಿ ನಡೆಸಿ ಕಳೆದ 10 ವರ್ಷಗಳಲ್ಲಿ ಜನಸಂಖ್ಯೆ ಶೇ.10ರಷ್ಟು ಏರಿಕೆಯಾಗಿದೆ ಎಂದು ವರದಿ ಇದೆ. ಆದರೆ ಮತದಾರರು ಮಾತ್ರ ಶೇ.40ರಷ್ಟು ಏರಿಕೆ ಹೇಗೆ ಆಯಿತು ಎಂದು ಪ್ರಶ್ನಿಸಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಶೀಲಿಸಿದಾಗ ಒಂದೇ ವ್ಯಕ್ತಿ 26 ಭಿನ್ನ ಮತದಾರ ಗುರುತು ಚೀಟಿ ಪಡೆದಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಪತ್ತೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Next Story

RELATED STORIES