Top

ಸಿಆರ್​ಪಿಎಫ್​ ವಾಹನ ಮೇಲೆ ಹರಿದು ಮೂವರು ಪ್ರತಿಭಟನಕಾರರ ಸಾವು

ಸಿಆರ್​ಪಿಎಫ್​ ವಾಹನ ಮೇಲೆ ಹರಿದು ಮೂವರು ಪ್ರತಿಭಟನಕಾರರ ಸಾವು
X

ಮಳೆಯ ಕಾರಣ ಹಿರಿಯ ಅಧಿಕಾರಿಯನ್ನು ಮನೆಗೆ ಬಿಟ್ಟು ಮರಳುತ್ತಿದ್ದ ಸಿಆರ್​ಪಿಎಫ್​ ಯೋಧರ ವಾಹನದ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ. ಮುಗಿಬಿದ್ದ ಪ್ರತಿಭಟನಕಾರರ ಮೇಲೆಯೇ ವಾಹನ ಚಲಿಸಿದ್ದರಿಂದ ಮೂವರು ಮೃತಪಟ್ಟ ಘಟನೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜರುಗಿದೆ.

ಘಟನೆ ಬೆನ್ನಲ್ಲೇ ಪೊಲೀಸರು ಸಿಆರ್​ಪಿಎಫ್ ಯೋಧರು ಹಾಗೂ ಕಲ್ಲು ತೂರಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಯತ್ನ ಹಾಗೂ ಶಾಂತಿ ಕದಡುವ ಯತ್ನ ಪ್ರಕರಣವನ್ನು ಪ್ರತಿಭಟನಕಾರರ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದರೆ, ಕೆಟ್ಟ ಚಾಲನೆ ಆರೋಪದ ಮೇಲೆ ಯೋಧರ ವಿರುದ್ಧ ಕೇಸು ದಾಖಲಾಗಿದೆ.

ಕೇಂದ್ರ ಗೃಹಸಚಿವ ರಾಜನಾಥ್​ ಸಿಂಗ್ ಭೇಟಿಗೂ ಮುನ್ನ ಈ ಘಟನೆ ನಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಯೋಧರ ವಿರುದ್ಧ ಪ್ರಕರಣ ದಾಖಲಾಗಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿಂದೆ ಯೋಧರು ಗುಂಡು ಹಾರಿಸಿ ಕೆಲವು ಪ್ರತಿಭಟನಕಾರರನ್ನು ಕೊಂದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದು ವಿವಾದಕ್ಕೆಡೆ ಮಾಡಿಕೊಟ್ಟಿತ್ತು.

Next Story

RELATED STORIES