Top

ರಚಿತಾಗೆ ‘ಐಲವ್​ಯು’ ಅಂತಿದ್ದಾರೆ ರಿಯಲ್ ಸ್ಟಾರ್..!

ರಚಿತಾಗೆ ‘ಐಲವ್​ಯು’ ಅಂತಿದ್ದಾರೆ ರಿಯಲ್ ಸ್ಟಾರ್..!
X

ಪ್ರಜಾಕೀಯ ಶುರುಮಾಡಿ ಹಿನ್ನಡೆ ಅನುಭವಿಸಿದ ಉಪೇಂದ್ರ, ಮತ್ತೆ ಸಿನಿಮಾ ‘ಐ ಲವ್ ಯು’ ಅಂತ ಸಿನಿಮಾರಂಗವನ್ನ ಅಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಆರ್. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ನಟಿಸ್ತಿರುವ ಐ ಲವ್ ಸಿನಿಮಾ ಸೆಟ್ಟೇರಿದೆ. ಇದೀಗ ಈ ಚಿತ್ರದ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾರಾಮ್ ಆಯ್ಕೆಯಾಗಿರೋ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಚಿತ್ರದಲ್ಲಿ ನಾಯಕನಷ್ಟೇ ಪ್ರಾಮುಖ್ಯತೆ ಇರೋ ಪಾತ್ರದಲ್ಲಿ ರಚ್ಚು ರಂಗೇರಿಸೋಕೆ ರೆಡಿಯಾಗಿದ್ದಾರೆ.

ಈ ಹಿಂದೆ ರಿಯಲ್ ಸ್ಟಾರ್ ಅಭಿನಯದ ಉಪ್ಪಿ ರುಪ್ಪಿ ಚಿತ್ರಕ್ಕೆ ರಚಿತಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಕೆಲ ದಿನಗಳ ಶೂಟಿಂಗ್​ ನಂತ್ರ ಆ ಚಿತ್ರದ ಕಥೆ ಏನಾಯ್ತು ಅನ್ನೋದು ಗೊತ್ತೇ ಆಗಲಿಲ್ಲ. ಟಾಪ್ ಹೀರೋಗಳ ಜೊತೆ ನಟಿಸುತ್ತಾ ಬರ್ತಿರೋ ರಚಿತಾ ಮತ್ತೊಮ್ಮೆ ಸೂಪರ್ ಸ್ಟಾರ್​ಗೆ ಜೋಡಿಯಾಗೋ ಲಕ್ಕಿ ಛಾನ್ಸ್​​ ಗಿಟ್ಟಿಸಿ ಕೊಂಡಿದ್ದಾರೆ. ನಿರ್ದೇಶಕ ಆರ್, ಚಂದ್ರು ಹೇಳಿರೋ ಕಥೆ ಕೇಳಿ ಥ್ರಿಲ್ ಆಗಿರುವ ಗುಳಿಕೆನ್ನೆ ಚೆಲುವೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಐ ಲವ್ ಯು ಚಿತ್ರದಲ್ಲಿ ಉಪ್ಪಿ ಪಾತ್ರದಷ್ಟೇ ರಚಿತಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಅಂತೆ. ಇನ್ನೂ ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಆರ್. ಚಂದ್ರು ನಿರ್ದೇಶನದ ಕನಕ ಚಿತ್ರಕ್ಕೆ ರಚಿತಾ ನಾಯಕಿ ಆಗಬೇಕಿತ್ತಂತೆ. ಡೇಟ್ಸ್​ ಪ್ರಾಬ್ಲಂನಿಂದ ಆ ಚಿತ್ರದಲ್ಲಿ ನಟಿಸೋಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಆರ್. ಚಂದ್ರು ಚಿತ್ರದಲ್ಲಿ ನಟಿಸೋ ಅವಕಾಶ ಅವರ ಪಾಲಾಗಿದ್ದು, ಉಪೇಂದ್ರ ಜೊತೆ ಸ್ಕ್ರೀನ್​ ಶೇರ್ ಮಾಡಿಕೊಳ್ಳುವ ಸಂತಸದಲ್ಲಿದ್ದಾರೆ. ಈಗಾಗಲೇ ಐ ಲವ್ ಯು ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಸ್ಟಾರ್ಟ್ ಆಗಿದ್ದು, ಇದೇ ತಿಂಗಳು ಶೂಟಿಂಗ್ ಶುರುವಾಗಲಿದೆ.

Next Story

RELATED STORIES