Top

ಸುಲಿಗೆಕೋರರಿಂದ ಸೈಕ್ಲಿಸ್ಟ್ ಬಚಾವ್ ಮಾಡಿದ ಹಾಲಿವುಡ್ ನಟ

ಸುಲಿಗೆಕೋರರಿಂದ ಸೈಕ್ಲಿಸ್ಟ್ ಬಚಾವ್ ಮಾಡಿದ ಹಾಲಿವುಡ್ ನಟ
X

ದಾರಿಹೋಕನನ್ನು ಸುತ್ತುವರಿದು ಸುಲಿಗೆಗೆ ಯತ್ನಿಸುತ್ತಿದ್ದಾಗ ಅದೇ ದಾರಿಯಲ್ಲಿ ಆಕಸ್ಮಿಕವಾಗಿ ಬಂದ ಬಂದ ಹೀರೊ ಚಂಗನೆ ಜಿಗಿದು ಆ ದಾರಿಹೋಕನನ್ನು ಕಾಪಾಡುತ್ತಾನೆ. ಇದು ಸಿನಿಮಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ.

ಆದರೆ ಅದೇ ಹೀರೊ, ಬರೀ ಹೀರೊ ಅಲ್ಲ, ಸೂಪರ್ ಹೀರೊ ನಿಜ ಜೀವನದಲ್ಲಿ ಈ ರೀತಿ ದಾರಿಹೋಕನನ್ನು ಕಾಪಾಡಿದರೆ ಹೇಗಿರುತ್ತೇ? ಹೌದು, ಇದು ನಿಜ. ಹಾಲಿವುಡ್ ನೂತನ ಪತ್ತೆದಾರ ಶರ್ಲಾಕ್ ಹೋಮ್ ಹಾಗೂ ಡಾಕ್ಟರ್ ಸ್ಟ್ರೇಂಜ್ ಸೂಪರ್ ಹೀರೊ ಪಾತ್ರಗಳಿಂದ ಮಿಂಚುತ್ತಿರುವ ಇಂಗ್ಲೆಂಡ್​ನ ಬೆಂಡಿಕ್ಟ್​ ಕಂಬರ್​ಬ್ಯಾಡ್ಜ್​ ಇಂತಹದ್ದೊಂದು ಸಾಹಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಘಟನೆ ಲಂಡನ್​ನಲ್ಲಿ ನಡೆದಿದೆ.

41 ವರ್ಷದ ಕಂಬರ್​ಬ್ಯಾಡ್ಜ್ ಆಹಾರ ಪೂರೈಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೈಕಲ್​ ಸವಾರನನ್ನು ಅಡ್ಡಗಟ್ಟಿ ದೋಚಲು ಯತ್ನಿಸುತ್ತಿದ್ದರು. ಆಗ ಅದೇ ವೇಳೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಕಂಬರ್ ಬ್ಯಾಡ್ಜ್, ಕೂಡಲೇ ಟ್ಯಾಕ್ಸಿಯಿಂದ ಜಿಗಿದು ಸೈಕಲ್ ಸವಾರನ ರಕ್ಷಣೆಗೆ ಧಾವಿಸಿದ್ದಾರೆ.

ಸೈಕಲ್ ಸವಾರಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರೂ ಯಾವುದೇ ಕಳವು ಮಾಡಿಲ್ಲ. ಪ್ರಕರಣದ ಸಂಬಂಧ ಯಾರನ್ನೂ ಬಂಧಿಸಿಲ್ಲ. ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಆದರೆ ಈ ಘಟನೆ ಕೆಲವು ತಿಂಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

Next Story

RELATED STORIES