Top

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಪಿಎಸ್‌ಐ ಮೇಲೆ ಕಲ್ಲು ತೂರಾಟ

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಪಿಎಸ್‌ಐ ಮೇಲೆ ಕಲ್ಲು ತೂರಾಟ
X

[story-lines]ವಿಜಯಪುರ : ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ದಂಧೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ರಾಜ್ಯದ ಗಡಿ ಭಾಗದಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ಹೋದ ಪಿಎಸ್‌ಐ ಮೇಲೆಯೇ ಮರಳು ದಂಧೆಕೋರರು ಕಲ್ಲು ತೂರಾಟ ನಡೆಸಿರುವ ಘಟನೆ ತಡವಾಗಿ ಇಂಡಿ ತಾಲ್ಲೂಕಿನ ಭೀಮಾತೀರದ ಗಡಿ ಗ್ರಾಮ ದಸೂರು ಬಳಿ ನಡೆದಿದೆ.

ಹೆಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಗಣಿಗಾರಿಕೆ

ಇಂಡಿ ತಾಲ್ಲೂಕಿನ ಭೀಮಾತೀರದ ಗಡಿ ಗ್ರಾಮ ದಸೂರು ಬಳಿ, ಅಕ್ರಮ ಗಣಿಗಾರಿಕೆ ಹೆಗ್ಗಿಲ್ಲದೇ ನಡೆಯುತ್ತಿತ್ತು. ಇದರಿಂದಾಗಿ ಬೇಸತ್ತಿದ್ದ ದಸೂರು ಗ್ರಾಮಸ್ಥರು ಈ ಸಂಬಂಧ ಚಡಚಣ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಳೆದ 31ರ ರಾತ್ರಿ, ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಗೋಪಾಲ್‌ ಹಳ್ಳೂರು ನೇತೃತ್ವದಲ್ಲಿ ದಾಳಿ ನಡೆಸಿದರು.

ದಾಳಿ ತಡೆಯಲು ಹೋದ ಪಿಎಸ್‌ಐ ಗೋಪಾಲ್ ಹಳ್ಳೂರು ಮೇಲೆ ದಾಳಿ

ಈ ದಾಳಿಯ ವೇಳೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ದಂಧೆಕೋರರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಪಿಎಸ್‌ಐಗೆ ಸಣ್ಣಪುಟ್ಟ ಗಾಯಗಳಾಗಿದ್ದಾವೆ. ಅಲ್ಲದೇ ಒಂದು ಬೈಕ್‌ ಕೂಡ ಜಖಂ ಆಗಿದೆ.

ಮಹಾರಾಷ್ಟ್ರದಿಂದ ಬಂದು ದಂಧೆ, ದಸೂರು ಗ್ರಾಮಸ್ಥರ ಆಕ್ರೋಶ

ಅಂದಹಾಗೇ ಕೆಲವರು ಮಹಾರಾಷ್ಟ್ರದಿಂದ ಬಂದು ಅಕ್ರಮ ಮರಳು ದಂಧೆ ನಡೆಸುತ್ತಿದ್ದರು. ಇದರಿಂದಾಗಿ ಬೇಸತ್ತಿದ್ದ ಗ್ರಾಮಸ್ಥರು ಪೊಲೀಸರ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ದಾಳಿ ನಡೆದ ವೇಳೆ ಪಿಎಸ್‌ಐ ಮೇಲೆ ದಂಧೆ ಕೋರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದಾಗಿ ದಸೂರು ಗ್ರಾಮಸ್ಥರು ದಂಧೆ ಕೋರರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ

ಈ ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪ್ರಕಾಶ ನಿಕ್ಕಂ ಭೇಟಿ ಪರಿಶೀಲನೆ. ದಂಧೆ ಕೋರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೇ ಕಲ್ಲು ತೂರಾಟ ನಡೆಸಿದ ಅಕ್ರಮ ಮರಳು ದಂಧೆ ಕೋರರ ಬಂಧನಕ್ಕಾಗಿ ಇದೀಗ ಬಲೆ ಬೀಸಲಾಗಿದೆ.

Next Story

RELATED STORIES