Top

ಮನಸೆಳೆದ ನವಿಲಿನ ನರ್ತನ : ಕಂಡು ಖಷಿ ಪಟ್ಟ ಜನ

ಮನಸೆಳೆದ ನವಿಲಿನ ನರ್ತನ : ಕಂಡು ಖಷಿ ಪಟ್ಟ ಜನ
X

[story-lines]

ನೆಲಮಂಗಲ : ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಮಳೆಯ ಸಿಂಚನಕ್ಕೆ, ಧರಣಿಯಲ್ಲಿ ಹಸಿರು ಮೂಡಿ, ಎಲ್ಲೆಲ್ಲೂ ಹಚ್ಚನೆಯ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಸಂದರ ಪ್ರಕೃತಿಯ ಸೊಬಗಿನ ನಡುವೆ, ನವಿಲಿನ ನರ್ತನ ಕಂಡರೇ ನಿಮಗೆ ಇನ್ನೂ ಖುಷಿ ಆಗಬಹುದು ಅಲ್ವಾ.?

ಅಂತಹ ಅಪರೂಪದ ನವಿಲಿನ ನರ್ತನ, ಬೆಂಗಳೂರಿಗೆ ಕೂಗಳತೆಯ ದೂರದಲ್ಲಿನ ನೆಲಮಂಗಲದಲ್ಲಿ ಕಂಡು ಬಂದಿದೆ. ಆ ಎಕ್ಸಿಕ್ಲೂಸಿವ್ ವೀಡಿಯೋ ನಮ್ಮ ಟಿವಿ5ಗೆ ಲಭ್ಯವಾಗಿದೆ. ಅಂತಹ ನವಿಲಿನ ನರ್ತನ ನೀವು ಒಮ್ಮೆ ನೋಡಿ...

ಈ ದೃಶ್ಯ ಸೆರೆ ಹಿಡಿದಿದ್ದು ಹೀಗೆ...

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದೆ. ಗ್ರಾಮದ ನಿವಾಸಿ ಲೋಕೇಶ್ ಗೌಡ ಅವರ ಮನೆಯ ಮುಂದೆ ಜಾನುವಾರುಗಳ ಬಳಿ, ಗಂಡು ನವಿಲು ತನ್ನ ಸೊಬಗನ್ನ ತೋರಿದೆ.

ಸರ್ವೆ ಸಾಮಾನ್ಯವಾಗಿ ಇಂತಹ ಅಪರೂಪದ ದೃಶ್ಯವನ್ನ ಅರಣ್ಯ ಪ್ರದೇಶದಲ್ಲಿ ಹಾಗೂ ಪ್ರಾಣಿ ಪಕ್ಷಿಗಳ ಸಂಗ್ರಹಾಲಯದಲ್ಲಿ ನೋಡಬಹುದು. ಆದ್ರೆ ಕಾಡಿನಿಂದ ಗ್ರಾಮಕ್ಕೆ ಬಂದ ನವಿಲು ನೃತ್ಯ ನರ್ತನ ಗೈದಿದ್ದು ಕಂಡು, ಇಡೀ ಗ್ರಾಮಸ್ಥರ ದಂಡೇ ನೆರೆದು ನೃತ್ಯವನ್ನು ಕಂಡು ಕಣ್ ತುಂಬಿಕೊಂಡರು. ಈ ಮೂಲಕ ಗ್ರಾಮಸ್ಥರಲ್ಲಿ ಸಂತಸವನ್ನ ಮೂಡಿಸಿತು ಕ್ಷಣಕಾಲದ ನವಿಲಿನ ನೃತ್ಯ ವೈಭವ..

Next Story

RELATED STORIES