Top

ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ

ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ
X

ಬೆಳಗಾವಿ : ಕ್ಯಾಮೆರಾ ತೆಗೆದುಕೊಂಡ ವಿಚಾರವಾಗಿ ಯುವಕನ್ನೊಬ್ಬನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ನೆಹರುನಗರದ ನಿವಾಸಿ ಬಸವರಾಜ್ ಯಲ್ಲಪ್ಪಾ ಕಾಕತಿ 22 ವಯಸ್ಸು ಕೊಲೆಯಾದ ಯುವಕ. ಬಸವರಾಜ ಸೇಲ್ಸಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ನಿನ್ನೆ ರಾತ್ರಿ ಎಂದಿನಂತೆ ಮನೆಯಲ್ಲಿ ಊಟ ಮಾಡಿ, ವಾಕಿಂಗಗೆ ಹೋಗುವುದಾಗಿ ಹೇಳಿ ಹೋಗಿದ್ದಾನೆ. ಆದ್ರೆ ತಡರಾತ್ರಿಯಾದ್ರು ಬಸವರಾಜ ಮನೆಗೆ ಬಾರದ ಹಿನ್ನಲೆ ಕುಟುಂಬಸ್ಥರು ಆತಂಕದಲ್ಲಿಯೇ ರಾತ್ರಿ ಕಳೆದಿದ್ದಾರೆ. ಆದ್ರೆ ಬೆಳಗಾಗುವುದರಲ್ಲಿ ಬಸವರಾಜ ಹೆಣವಾಗಿ ಪತ್ತೆಯಾಗಿದ್ದಾರೆ.

ನೆಹರು ನಗರದ ಮಹಾದೇವ ಮಂದಿರ ಬಳಿಯ ಬಸವರಾಜ ಶವನ್ನ ನೋಡಿದ ಜನರು ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ನಿನ್ನೆ ರಾತ್ರಿ ಕ್ಯಾಮೆರಾ ವಿಚಾರವಾಗಿ ಬಸವರಾಜ ಮತ್ತು ನಾಲ್ವರ ಮಧ್ಯೆ ಗಲಾಟೆಯಾಗಿದೆ. ಇವರೇ ಬಸವರಾಜನನ್ನ ಚೂರಿಯಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದು, ಈ ಕೊಲೆ ಪ್ರಕರಣಕ್ಕ ಸಂಬಂಧಿಸಿದಂತೆ ಸದಾಶಿವ ನಗರದ ಸೂರ್ಯ ಎಂಬ ಯುವಕನನ್ನ ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.. ಇನ್ನುಳಿದ ಮೂವರ ಶೋಧಕಾರ್ಯವನ್ನ ಪೊಲೀಸ್ರು ಆರಂಭಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಇನ್ಸಪೆಕ್ಟರ್ ರಮೇಶ ತನಿಖೆಯನ್ನ ಕೈಗೊಂಡಿದ್ದಾರೆ.

Next Story

RELATED STORIES