Top

KSRTC ಬಸ್‌ಗಳ ಮುಖಾಮುಖಿ ಡಿಕ್ಕಿ : ಐವರ ದುರ್ಮರಣ

KSRTC ಬಸ್‌ಗಳ ಮುಖಾಮುಖಿ ಡಿಕ್ಕಿ : ಐವರ ದುರ್ಮರಣ
X

[story-lines]ಕಲಬುರ್ಗಿ : ಬೆಳ್ಳಂಬೆಳಿಗ್ಗೆ, ಎರಡು ಸರ್ಕಾರಿ ಬಸ್‌ಗಳ ಮುಖಾಮುಖಿ ಡಿಕ್ಕಿಯಿಂದಾಗಿ, ಭೀಕರ ರಸ್ತೆ ಅಪಘಾತಕ್ಕೆ ಸಂಭವಿಸಿದೆ. ಇದರಿಂದಾಗಿ, ಐವರು ದುರ್ಮಣವಾಗಿರುವ ಘಟನೆ ಕಲಬುರ್ಗಿಯ ಜೇವರ್ಗಿ ಬಳಿ ನಡೆದಿದೆ.

ದಾವಣಗೆರೆಯಿಂದ ಶಾಲಗೆ ತೆರಳುತ್ತಾ ಇದ್ದ ಓರ್ವ ಶಿಕ್ಷಕಿ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಮತ್ತೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರನ್ನು ಚಿಗರತಿಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಆಯೇಷಾ ಸಿದ್ದಕಿ, ಫರೀನ್‌ ಬೇಗಂ, ಯಾಳವಾರ ಶಾಲೆಯ, ಸಹರಾ ಕಲತೂನ್ ಎಂದು ತಿಳಿದು ಬಂದಿದೆ. ಇದೇ ಘಟನೆಯಲ್ಲಿ ಬಸ್‌ ಚಾಲಕ ಕೂಡ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಮೃತರ ಸಂಖ್ಯೆ 5 ಎಂದು ತಿಳಿದು ಬಂದಿದೆ.

ಅಂದಹಾಗೇ, ದಾವಣಗೆರೆ ಕಡೆಯಿಂದ ಕಲಬುರ್ಗಿ ಕಡೆಗೆ ಈ ಸರ್ಕಾರಿ ಬಸ್‌ ಪ್ರಯಾಣಿಸುತ್ತಿತ್ತು. ಇಂತಹ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಎಂದಿನಂತೆ ಶಾಲೆಗೆ ಕೆಲಸಕ್ಕಾಗಿ ಶಿಕ್ಷಕಿಯರು ಸೇರಿದಂತೆ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಈ ಬಸ್ ಜೇವರ್ಗಿ ಬಳಿ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಓರ್ವ ಶಿಕ್ಷಕಿ ಸಾವನ್ನಪ್ಪಿದ್ದಾರೆ. ಅಲ್ಲದೇ ಚಾಲಕ ಸೇರಿ ಮತ್ತೆ ಮೂವರು ಶಿಕ್ಷಕಿಯರು ಆಸ್ಪತ್ರೆಯಲ್ಲಿ ಸಾಗಿಸಿದ ನಂತ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಇನ್ನೂ ಇದೇ ದುರಂತದಲ್ಲಿ 8ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಜೇವರ್ಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಜೇವರ್ಗಿ ಪೊಲೀಸರು, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Next Story

RELATED STORIES