Top

ಕಾಫಿನಾಡಲ್ಲಿ ಗಮನ ಸೆಳೆದ ಪುನೀತ್ ರಾಜ್‌ಕುಮಾರ್‌ ಅಭಿಮಾನಿಗಳ ಸ್ಟಂಟ್

ಕಾಫಿನಾಡಲ್ಲಿ ಗಮನ ಸೆಳೆದ ಪುನೀತ್ ರಾಜ್‌ಕುಮಾರ್‌ ಅಭಿಮಾನಿಗಳ ಸ್ಟಂಟ್
X

ಚಿಕ್ಕಮಗಳೂರು : ಅವರು ಪಕ್ಕಾ ಪುನೀತ್ ರಾಜಕುಮಾರ ಅಭಿಮಾನಿಗಳು. ಪುನೀತ್ ರಾಜಕುಮಾರ ಅಂದ್ರೆ ಅವರಿಗೆ ಪಂಚಪ್ರಾಣ. ಪುನೀತ್ ರಾಜಕುಮಾರ ಚಿತ್ರಗಳು ಸಂಗ್ರಹಿಸಿ ತಮ್ಮ ಮನೆಯಲ್ಲಿ ಅಂಟಿಸಿದ್ದಾರೆ. ಅಷ್ಟೇಅಲ್ಲದೇ ಇವರು ಪುನೀತ್ ರಾಜಕುಮಾರನಂತೆಯೇ ಸ್ಟಂಟ್, ಕಿಕ್, ಡ್ಯಾನ್ಸ್ ಕೂಡಾ ಮಾಡ್ತಾರೆ. 15ಕ್ಕೂ ಹೆಚ್ಚು ಯುವಕರ ಗುಂಪು ಪುನೀತ್ ರಾಜಕುಮಾರ ಸ್ಟಂಟ್ ಗ್ರುಪ್ ಮಾಡಿಕೊಂಡು ಪುನೀತ್ ಅವರ ಎದುರು ತಮ್ಮ ಕಲೆ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಅಂತ ಅಭಿಮಾನಿಗಳು ಯಾರೂ.? ಅಷ್ಟಕ್ಕೂ ಅವರು ಯಾವ ಊರಿನವರು? ಎಂದು ಹಲವಾರು ಪ್ರಶ್ನೆಗಳು ತಮಗೆ ಮೂಡುತ್ತಿರಬಹುದು. ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಮುಂದೆ ಓದಿ.

ಮನೆಯಲ್ಲಿ ಪುನೀತ್ ರಾಜಕುಮಾರ ಹಾಗೂ ಅವರ ಕುಟುಂಬದ ಭಾವಚಿತ್ರಗಳು, ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್ ಮಾಡುತ್ತಿರುವ ಅಭಿಮಾನಿಗಳು. ಇವರೆಲ್ಲರೂ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿನ ಬಡ ಪ್ರತಿಭೆಗಳು.

ಇವರು ಜೋಪಡಿ ಪಟ್ಟಿಯಲ್ಲಿ ವಾಸವಾಗಿದ್ದು ಪುನೀತ್ ರಾಜಕುಮಾರ ಅಂದ್ರೆ ಇವರಿಗೆ ಪಂಚ ಪ್ರಾಣ. ಇವರ ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್ ಕೂಡಾ ಯಾವುದೇ ತರಬೇತಿ ಇಲ್ಲದೇ ಸಲೀಸಾಗಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಗೋಪಿ ಎಂಬಾತ ಯುವಕ 15 ಕ್ಕೂ ಹೆಚ್ಚು ಯುವಕರನ್ನು ಕರೆದುಕೊಂಡು ಪುನೀತ್ ರಾಜಕುಮಾರ್ ಸ್ಟಂಟ್ ಗ್ರುಪ್ ಮಾಡಿಕೊಂಡು ಇವರು ತಮ್ಮ ಕಲೆಯನ್ನು ಒಮ್ಮೆ ಪುನೀತ್ ರಾಜಕುಮಾರ ಎದುರು ಪ್ರದರ್ಶಿಸಲು ಹಾತೋರೆಯುತ್ತಿದ್ದಾರೆ.

ಗೋಪಿ ಎಂಬಾತ ತನ್ನ ಹದಿನೈದಕ್ಕೂ ಹೆಚ್ಚು ಗೆಳೆಯರಿಗೆ ಪುನೀತ್ ರಾಜಕುಮಾರ ಯಾವ ರೀತಿ ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್, ಮಾಡುತ್ತಾರೆ. ಯಾವುದೇ ರೀತಿಯಲ್ಲಿ ತರಬೇತಿ ಕೇಂದ್ರಗಳಿಗೆ ಹೋಗಿಲ್ಲ. ಪುನೀತ್ ಅವರ ಕಲೆಗಳನ್ನು ಸಿನೆಮಾ, ಟಿವಿಗಳಲ್ಲಿ ನೋಡಿ ಕಲಿತು ಕೊಂಡಿದ್ದಾರೆ. ಇವರು ಹರಕು ಚಿಂದಿಗಳನ್ನು ಆಯ್ದು ಅದನ್ನು ಬೆಡ್ ಮಾಡಿಕೊಂಡು ಇದೇ ಮೈದಾನ ಅಂತೇನಿಲ್ಲ. ಇವರಿಗೆ ಯಾವುದೇ ಮೈದಾನದಲ್ಲಿ ಅವಕಶಾ ನೀಡುತ್ತಾರೋ ಅಲ್ಲಿ ಕಲಿಯುತ್ತಾರೆ.

ಇವರು ಚಿಂದಿ ಆಯ್ದು ಬೆಡ್ ಮಾಡಿದ್ದನ್ನು ಎಷ್ಟೋ ಸಲ ಜನ ಸುಟ್ಟು ಹಾಕಿದ್ದಾರೆ. ಇವರು ಹಠ‌ ಬಿಡದೇ ತಮ್ಮ ಪ್ರಯತ್ನ ಮುಂದುವರೆಸಿದ್ದು ಎಲ್ಲವನ್ನು ಕಲಿತಿದ್ದಾರೆ. ಇವರ ಈ ಸ್ಟಂಟ್ ನ್ನು ಚಿತ್ರಿಕರಿಸಿ ಸಾಮಾಜಿಕ‌ ಜಾಲತಾಣವಾದ ಪೇಸ್ಬುಕ್ನಲ್ಲಿ ಹರಿಬಿಟ್ಟಿದ್ದರಿಂದ ಸುಮಾರು ೧೧ ಲಕ್ಷಕ್ಕೂ ಅಧಿಕ ಜನ ನೋಡಿದ್ದಾರೆ. ಇವರ ಈ‌ ಕಲೆ ಗುರುತಿಸಿ ಈಗಾಗಲೇ ರಗಡ ಸಿನೇಮಾದಲ್ಲಿ ಒಂದು ಪಾತ್ರವೂ ದೊರಕಿದೆ. ಇವರಿಗೆ ಬೇರೆ ಗುರಿ ಇಲ್ಲ. ಪುನೀತ್ ರಾಜಕುಮಾರ‌ ಎದುರು ತಮ್ಮ‌ಕಲೆ ಪ್ರದರ್ಶನ ಮಾಡುವುದು ಒಂದೇ ಯಾಗಿದೆ.

ಹಾರೂಗೇರಿ ಪಟ್ಟಣದಲ್ಲಿ ಯಾವುದೇ ಡ್ಯಾನ್ಸ್ ಸ್ಪರ್ದೆ ಇದ್ರೆ ಅದರಲ್ಲಿ ಈ ಗುಂಪಿನ ಯುವಕರೆ ಪ್ರಥಮ ಬರುತ್ತಾರೆ. ಇಂತಹ ಡ್ಯಾನ್ಸ್, ಸ್ಟಂಟ್, ಬ್ಯಾಕ್ ಸಮರ, ಪ್ರಂಟ್ ಸಮರ, ಕಿಕ್ ಕಲೆ ಹೊಂದಿರುವ ಯುವಕರು ಸೂಕ್ತ ವೇದಿಕೆ ಅವಶ್ಯವಾಗಿದೆ. ಪುನೀತ್ ರಾಜಕುಮಾರ ಅವರ ಎದುರು ತಮ್ಮ ಕಲೆ ಪ್ರದರ್ಶಿಸುವ ಆಸೆ ಇವರದ್ದಾಗಿದೆ. ಒಟ್ಟಿನಲ್ಲಿ ಇಂತಹ ಕಲಾಕಾರರು ಯಾವುದೇ ತರಬೇತಿ ಗೆ ಹೋಗದೇ ಉತ್ತಮವಾಗಿ ಕಲೆ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ.

ವರದಿ : ಪ್ರವೀಣ್‌ ಕುಮಾರ್, TV5 ಚಿಕ್ಕಮಗಳೂರು

Next Story

RELATED STORIES