Top

ಕಬೀರ್ ಚಾಲೆಂಜ್ ಒಪ್ಪಿಕೊಳ್ತಾರಾ ಸುದೀಪ್​?

ಕಬೀರ್ ಚಾಲೆಂಜ್ ಒಪ್ಪಿಕೊಳ್ತಾರಾ ಸುದೀಪ್​?
X

ಪೈಲ್ವಾನ್... ಭಾರೀ ನಿರೀಕ್ಷೆ ಹುಟ್ಟಿಸಿರುವ ಹೈವೋಲ್ಟೇಜ್ ಸಿನಿಮಾ. ಕಿಚ್ಚ ಸುದೀಪ್ ಪೈಲ್ವಾನ್ ಪಾತ್ರದಲ್ಲಿ ಅಖಾಡಕ್ಕಿಳಿದಿರೋ ಸಿನಿಮಾ. ಹೆಬ್ಬುಲಿ ನಂತರ ಮತ್ತದೇ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್​ನ ಎರಡನೇ ಸಿನಿಮಾ. ಟೈಟಲ್​ನಿಂದಲೇ ಸಖತ್ ಸದ್ದು ಮಾಡಿದ್ದ ಪೈಲ್ವಾನ್, ಇದೀಗ ಚೆನ್ನೈನಲ್ಲಿ ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್ ಮುಗಿಸಿದೆ.

[story-lines] ಕಿಚ್ಚ ಸುದೀಪ್​ಗೆ ಹಿಂದಿ ಕಿರುತೆರೆ ನಟಿ ಆಕಾಂಕ್ಷಾ ನಾಯಕಿಯಾಗಿ ನಟಿಸ್ತಿರೋದು ಎಲ್ರಿಗೂ ಗೊತ್ತೇಯಿದೆ. ಅಷ್ಟೇ ಯಾಕೆ ಖಳನಟನಾಗಿ ಕಬೀರ್ ದುಹಾನ್ ಸಿಂಗ್ ಖದರ್ ತೋರೋಕೆ ಸಿದ್ದವಾಗಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್​ರ ಆಪ್ತ ಗೆಳೆಯ, ಬಾಲಿವುಡ್​ ಸ್ಟಾರ್ ಸುನೀಲ್ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ಸುದೀಪ್ ಅವರೇ ಹೇಳಿಕೊಂಡಂತೆ ಎರಡನೇ ಹಂತದ ಚಿತ್ರೀಕರಣಕ್ಕೆ ಸುನೀಲ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

ಕಬೀರ್ ದುಹಾನ್ ಸಿಂಗ್... ಪೈಲ್ವಾನ್ ಚಿತ್ರದ ಖಡಕ್ ಖಳನಾಯಕ. ಹರಿಯಾಣ ಮೂಲದ ಈ ಯಂಗ್​ಸ್ಟರ್, ಪಕ್ಕದ ಟಾಲಿವುಡ್​ನಲ್ಲಿ ಈಗಾಗ್ಲೇ ಖಡಕ್ ವಿಲನ್ ಆಗಿ ತನ್ನನ್ನ ತಾವು ಪ್ರೂವ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್​ರ ಈ ಹಿಂದಿನ ಹೆಬ್ಬುಲಿ ಸಿನಿಮಾದಲ್ಲೂ ವಿಲನ್ ರೋಲ್ ಪ್ಲೇ ಮಾಡಿದ್ದರು.

ಇದೀಗ ಮತ್ತೊಮ್ಮೆ ಸುದೀಪ್ ಎದುರು ತೊಡೆತಟ್ಟಿ ನಿಲ್ತಿರೋ ಕಬೀರ್, ತನ್ನ ಪಾತ್ರಕ್ಕಾಗಿ ದೇಹವನ್ನ ಮತ್ತಷ್ಟು ಹುರಿಗಟ್ಟಿಸುತ್ತಿದ್ದಾರೆ. ದಿನಕ್ಕೆ ಮೂರ್ನಾಲ್ಕು ತಾಸು ಜಿಮ್​ನಲ್ಲಿ ಬೆವರಿಳಿಸ್ತಿದ್ದಾರೆ. ಹೇಳಿಕೇಳಿ ಮೊದಲೇ ಇದೊಂದು ಕುಸ್ತಿ ಮತ್ತು ರೆಸ್ಲಿಂಗ್ ಕುರಿತ ಸಿನಿಮಾ ಆಗಿರೋದ್ರಿಂದ ಅದಕ್ಕಾಗಿ ಬೇರೆಯದ್ದೇ ರೀತಿಯಲ್ಲಿ ರೆಡಿಯಾಗ್ತಿದ್ದಾರೆ.

ಇತ್ತ ಕಿಚ್ಚ ಸುದೀಪ್ ಕೂಡ ಜಿಮ್​ನಲ್ಲಿ ಹೆಚ್ಚು ಕಾಲ ಕಳೆಯೋದ್ರ ಜೊತೆಗೆ ಪಾತ್ರಕ್ಕೆ ತಕ್ಕನಾಗಿ ರನ್ನಿಂಗ್, ಜಾಗಿಂಗ್, ಸ್ವಿಮ್ಮಿಂಗ್ ಅಂತೆಲ್ಲಾ ಕಸರತ್ತು ಮಾಡಿಕೊಂಡಿದ್ದಾರೆ. ಆದ್ರೀಗ ಪೈಲ್ವಾನ್ ಕಿಚ್ಚನಿಗೆ ವಿಲನ್ ಕಬೀರ್ ದುಹಾನ್ ಸಿಂಗ್ ಒಂದು ಚಾಲೆಂಜ್ ಮಾಡಿದ್ದಾರೆ. ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನದಂತೆ ಸುದೀಪ್​ಗೆ ನಾನು ಫಿಟ್ ಆಗಿದ್ದೀನಿ, ನೀವೂ..? ಅಂತ ಪ್ರಶ್ನಿಸಿದ್ದಾರೆ.

ರಾಜ್ ವರ್ಧನ್ ರಾಥೋಡ್ ಆರಂಭಿಸಿದ ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನ ಕೋಹ್ಲಿ- ಪ್ರಧಾನಿ ಮೋದಿ ಸೇರಿದಂತೆ ದೊಡ್ಡ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಪೈಲ್ವಾನ್ ವಿಲನ್​ನ ಈ ಖಡಕ್ ಚಾಲೆಂಜ್​ನ ಸುದೀಪ್ ಅಕ್ಸೆಪ್ಟ್ ಮಾಡ್ತಾರಾ ಅನ್ನೋದು ಕಾದುನೋಡಬೇಕು.

Next Story

RELATED STORIES